ರಜೆ ಕೋರಿ ಪೊಲೀಸ್ ಪೇದೆ ಬರೆದ ಪತ್ರ ವೈರಲ್!
ಬೆಂಗಳೂರು, ಜ.18: ನಾನು ಹೊಸದಾಗಿ ಮದುವೆ ಮಾಡಿಕೊಂಡಿದ್ದೇನೆ. ಜತೆಗೆ ಹೊಸ ಹುರುಪಿನಲ್ಲಿ ಇದ್ದೇನೆ. ಹೀಗಾಗಿ, ಹತ್ತು ದಿನಗಳ ಸತತ ಪರಿವರ್ತಿತ ರಜೆ ಅಥವಾ ರಜೆ ನೀಡಬೇಕೆಂದು ಕೋರಿ ಪೊಲೀಸ್ ಪೇದೆಯೋರ್ವ ಬರೆದಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದೆ.
ನಗರದ ಬೇಗೂರು ಪೊಲೀಸ್ ಠಾಣೆಯ ಪೇದೆಯೊಬ್ಬರು ಈ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ನನಗೆ ಹೊಸದಾಗಿ ಮದುವೆ ಆಗಿದ್ದು, ಹೊಸ ಹುರುಪು ಇದೆ. ನಮ್ಮ ಊರಿನಲ್ಲಿ ನಮ್ಮ ಮನೆ ದೇವರ ಪೂಜಾ ಕಾರ್ಯಕ್ರಮ ಇರುವ ಕಾರಣ ನನಗೆ ಫೆಬ್ರವರಿ 24ರಿಂದ ಮಾಚ್ 5ರವರೆಗೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.
ಹೀಗಾಗಿ, ನನಗೆ 10 ದಿನಗಳ ವರೆಗೆ ಪರಿವರ್ತಿತ ರಜೆ ಅಥವಾ ಗಳಿಕೆ ರಜೆಯನ್ನು ಮಂಜೂರು ಮಾಡಬೇಕಾಗಿ ನಿವೇದಿಸಿಕೊಳ್ಳುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ. ಈ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರಾರು ಎಂಬುದು ತಿಳಿದುಬಂದಿಲ್ಲ.
Next Story