ರಾಜ್ಯ ಬಜೆಟ್: ನಮ್ಮ ಮೆಟ್ರೋಗೆ 3 ಸಾವಿರ ಕೋಟಿ ರೂ.ಅನುದಾನದ ನಿರೀಕ್ಷೆ
ಬೆಂಗಳೂರು, ಫೆ.3 : ನಮ್ಮ ಮೆಟ್ರೋ 2ನೇ ಹಂತಕ್ಕೆ ರಾಜ್ಯ ಬಜೆಟ್ನಲ್ಲಿ ಸುಮಾರು ಮೂರು ಸಾವಿರ ಕೋಟಿ ರೂ. ಅನುದಾನ ದೊರಕುವ ನಿರೀಕ್ಷೆಯಿದೆ.
ಶುಕ್ರವಾರ ಕೇಂದ್ರ ಸರಕಾರ ಮಂಡಿಸಿದ ಮಧ್ಯಂತರ ಬಜೆಟ್ನಲ್ಲಿ ದೇಶದ ಎಲ್ಲ ಮೆಟ್ರೋ ಯೋಜನೆಗಳಿಗೆ ಒಟ್ಟು 17,714 ಕೊಟಿ ರೂ. ಘೋಷಿಸಲಾಗಿದೆ. ಅದರಲ್ಲಿ ನಮ್ಮ ಮೆಟ್ರೋ 2ನೇ ಹಂತಕ್ಕೆ 1,012 ಕೋಟಿ ರೂ. ಮೀಸಲಿಡಲಾಗಿದೆ. ಅದೇ ರೀತಿಯಲ್ಲಿ ರಾಜ್ಯ ಸರಕಾರ ಮಂಡಿಸಲಿರುವ ಈ ವರ್ಷದ ಬಜೆಟ್ನಲ್ಲಿ ಸುಮಾರು ಮೂರು ಸಾವಿರ ಕೋಟಿ ರೂ.ಗಳಷ್ಟು ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.
Next Story