ಜಲಮಂಡಳಿ: ತಿರಸ್ಕೃತ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಧಿ ವಿಸ್ತರಣೆ
ಬೆಂಗಳೂರು, ಫೆ.13: ಬೆಂಗಳೂರು ಜಲ ಮಂಡಳಿ ನೇಮಕಾತಿಯ ವಿಷಯಕ್ಕೆ ಸಂಬಂಧಿಸಿದಂತೆ ಆನ್ಲೈನ್ ಮುಖಾಂತರ ಸ್ವೀಕೃತಗೊಂಡ ಅರ್ಜಿಗಳಲ್ಲಿ ಅಪೂರ್ಣ ಮಾಹಿತಿ ಹಾಗೂ ಶುಲ್ಕ ಪಾವತಿ ಮಾಡದಿರುವಂತಹ ಅಭ್ಯರ್ಥಿಗಳ ತಿರಸ್ಕೃತ ಅರ್ಜಿಗಳ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಫೆ.18ರವರೆಗೆ ಗಡುವು ವಿಸ್ತರಿಸಲಾಗಿದೆ.
ಆಕ್ಷೇಪಣೆ ಸಲ್ಲಿಸಲು ಅಂತಿಮ ದಿನಾಂಕ ಮುಗಿದ ನಂತರ ಸಲ್ಲಿಸಲಾಗುವ ಯಾವುದೆ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಯಾವುದೆ ರೀತಿಯ ವಿಳಂಬ ಧೋರಣೆಗೆ ಅಭ್ಯರ್ಥಿಗಳೆ ನೇರ ಜವಾಬ್ದಾರರಾಗಿರುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ www.bwssb.gov.in ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story