ಪ್ರತಿಯೊಬ್ಬರಿಗೂ ಉದ್ಯೋಗದ ಭದ್ರತೆ ಅಗತ್ಯ: ನಟ ಪ್ರಕಾಶ್ ರೈ | Vartha Bharati- ವಾರ್ತಾ ಭಾರತಿ

---

ಪ್ರತಿಯೊಬ್ಬರಿಗೂ ಉದ್ಯೋಗದ ಭದ್ರತೆ ಅಗತ್ಯ: ನಟ ಪ್ರಕಾಶ್ ರೈ

ಬೆಂಗಳೂರು, ಫೆ.15: ಸಮಾಜದಲ್ಲಿ ಘನತೆಯಿಂದ ಬದುಕಲು ಪ್ರತಿಯೊಬ್ಬರಿಗೂ ಉದ್ಯೋಗದ ಭದ್ರತೆ ಅಗತ್ಯವಾಗಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.

ಶುಕ್ರವಾರ ನಗರದ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಉದ್ಯೋಗಕ್ಕಾಗಿ ಯುವಜನರು ಹಾಗೂ ಗುತ್ತಿಗೆ ನೌಕರರ ಮಹಾ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ‘ಯೂತ್ ಅಜೆಂಡಾ-2019’ ಯುವ ಆಗ್ರಹ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಲಸ ಮತ್ತು ಉದ್ಯೋಗ ಅನ್ನೋದು ಭಾಷೆ. ಅಲ್ಲದೆ, ಉದ್ಯೋಗ ಮನುಷ್ಯ ಇರುವಿಕೆಗೆ ಕಾರಣ. ಹೀಗಾಗಿ, ಒಂದು ಕೆಲಸವಿರಬೇಕು, ಅದು ಘನತೆಯಿಂದ ಬದುಕುವಂತಿರಬೇಕು ಎಂದ ಅವರು, ತನ್ನ ಶಕ್ತಿಯ ಮೂಲಕ ತನಗೆ ತಿಳಿಯದಂತೆ ಸಮಾಜದ ಬದಲಾವಣೆ ಹಾಗೂ ಕೆಲಸ ಮಾಡುತ್ತಾರೆ. ಅದನ್ನು ಮಾಡಲಿಕ್ಕಾದರೂ ಕೆಲಸ ಬೇಕಿದೆ ಎಂದು ಪ್ರತಿಪಾದಿಸಿದರು.

ಮನುಷ್ಯನಿಗೆ ಮೂಲಭೂತವಾಗಿ ಬೇಕಾದ ಘನತೆ ಸೃಷ್ಟಿಸಬೇಕು. ಉದ್ಯೋಗ ಎಂಬುದು ಹೊಟ್ಟೆ ತುಂಬಿಸಿಕೊಳ್ಳುವುದಲ್ಲ. ಘನತೆ ಹಾಗೂ ಭದ್ರತೆಗಾಗಿ ಬೇಕಿದೆ. ಅದರ ಜತೆಗೆ ಸಮಾಜದ ಎಲ್ಲರಿಗೂ ಅವಶ್ಯಕತೆಗೆ ತಕ್ಕಂತೆ ಶಿಕ್ಷಣ ಬೇಕು. ಆ ಮೂಲಕ ದೇಶದ ಒಳಿತಿಗಾಗುವಂತೆ ಮಾಡಬೇಕು ಎಂದು ಅವರು ಹೇಳಿದರು.

ಹಿಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದವರಿಗೆ ಅಷ್ಟೇ ಉದ್ಯೋಗ ಎಂಬ ಸ್ಥಿತಿ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಎಂಜಿಯರಿಂಗ್, ಡಾಕ್ಟರ್ ಅಷ್ಟೇ ಅಲ್ಲದೆ, ಎಲ್ಲರಿಗೂ ಉದ್ಯೋಗ ಸಿಗುವಷ್ಟು ವ್ಯಾಪಕವಾಗಿ ವ್ಯವಸ್ಥೆ ವಿಸ್ತರಿಸಿದೆ. ಜತೆಗೆ ಸಮಾಜವೂ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದ್ದು, ಮನುಕುಲವು ತನ್ನದೇ ಆದ ಅಗತ್ಯತೆಗಳನ್ನು ಕೋರುತ್ತದೆ. ಹೀಗಾಗಿ, ಎಲ್ಲರಿಗೂ ಶಿಕ್ಷಣ, ಉದ್ಯೋಗದ ಮೂಲಕ ಭದ್ರತೆ ಕಲ್ಪಿಸಬೇಕಾದ ಜವಾಬ್ದಾರಿ ಸರಕಾರಗಳಿಗೆ ಇದೆ ಎಂದರು.

ಇಂದಿನ ಭ್ರಷ್ಟಾಚಾರ ಹಾಗೂ ಹೊಣೆಗೇಡಿತನಕ್ಕೆ ನಮ್ಮ ಚುನಾವಣಾ ವ್ಯವಸ್ಥೆಯೇ ಕಾರಣವಾಗಿದೆ. ಚುನಾವಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆಯಿಲ್ಲ ಎಂದ ಅವರು, ಎಲ್ಲಿಯವರೆಗೂ ನಮ್ಮ ಹಕ್ಕುಗಳನ್ನು ಗೌರವಿಸದ, ನಮ್ಮ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿಗಳನ್ನು ಆಯ್ಕೆ ಮಾಡುತ್ತೇವೆಯೋ ಅಲ್ಲಿಯವರೆಗೂ ದೇಶ ಬದಲಾಗಲ್ಲ. ಹೀಗಾಗಿ, ರಾಜಕೀಯ ಪ್ರಜ್ಞೆಯೊಂದಿಗೆ ಮುಂದಿನ ಚುನಾವಣೆಯಲ್ಲಿ ದಿಟ್ಟ ಹೆಜ್ಜೆಯಿಡಬೇಕು ಎಂದು ಅವರು ಕೋರಿದರು.

ಹೋರಾಟಗಾರ ಎಸ್.ಆರ್.ಹಿರೇಮಠ್ ಮಾತನಾಡಿ, ದೇಶದಲ್ಲಿ ಸಮಾನತೆಗಾಗಿ ಹಲವಾರು ಹಂತದ ಚಳವಳಿಯನ್ನು ಕಂಡಿದೆ. ಅಂಬೇಡ್ಕರ್, ಬುದ್ಧ, ಬಸವ ಸೇರಿದಂತೆ ಅನೇಕರು ಹೋರಾಡಿದ್ದಾರೆ. ಆರೋಗ್ಯಕರ ಸಮಾಜಕ್ಕಾಗಿ ಶಿಕ್ಷಣ ಮಹತ್ವವಾದುದು ಎಂದು ಸಾರಿ ಹೇಳಿದ್ದಾರೆ. ಆದರೆ, ಅಧಿಕಾರಕ್ಕೆ ಬಂದವರೆಲ್ಲರೂ ಇವುಗಳನ್ನು ಧಿಕ್ಕರಿಸಿದ್ದಾರೆ ಎಂದು ದೂರಿದರು.

ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದಾಗ ನಿರುದ್ಯೋಗ ಸಮಸ್ಯೆ ಪ್ರಧಾನ ಸಮಸ್ಯೆಯಾಗುವುದಿಲ್ಲ. ಆದರೆ, ದೇಶದ ಬಹುತೇಕ ಸಂಪತ್ತು ಉಳ್ಳವರ ಕೈಯಲ್ಲಿದೆ ಎಂದ ಅವರು, ಮುಂದಿನ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮರು ಸ್ಥಾಪಿಸಬೇಕು. ಆದರೆ, ವಿರೋಧ ಪಕ್ಷಗಳ ಮಹಾಘಟಬಂಧನ್‌ನಿಂದ ದೇಶದ ಪ್ರಗತಿ ಅಥವಾ ಅಭಿವೃದ್ಧಿ ಆಗುತ್ತದೆ ಎಂಬ ಭ್ರಮೆಯಲ್ಲಿರಬಾರದು ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಆಂದೋಲದ ಸಂಚಾಲಕ ಎಚ್.ವಿ.ವಾಸು, ಮುತ್ತುರಾಜ್, ಮಲ್ಲಿಗೆ ಸಿರಿಮನೆ, ಸರೋವರ್ ಬೆಂಕಿಕೆರೆ, ರಾಜಶೇಖರ್ ಅಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಮುಖ ಹಕ್ಕೊತ್ತಾಯಗಳು:

- ಉದ್ಯೋಗ ಸೃಷ್ಟಿ ಕೇಂದ್ರಿತ ನೀತಿ, ಅದರ ಉಸ್ತುವಾರಿಗಾಗಿ ಉದ್ಯೋಗ ಆಯೋಗ ರಚನೆ

- ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರಿಗೆ ಉದ್ಯೋಗ ಭದ್ರತೆ ಹಾಗೂ ಸಮಾನ ವೇತನ

- ಎಲ್ಲರಿಗೂ ಗುಣಮಟ್ಟದ ಉನ್ನತ ಶಿಕ್ಷಣ ಸಿಗಬೇಕು.

- ಉದ್ಯೋಗದ ಹಕ್ಕು ಹಾಗೂ ಉದ್ಯೋಗ ಸ್ಥಳದಲ್ಲಿನ ಹಕ್ಕು ಎರಡೂ ಖಾತರಿಯಾಗಬೇಕು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top