ಸಿಸಿಬಿ ಪೊಲೀಸರಿಂದ ಕ್ಲಬ್ ಮೇಲೆ ದಾಳಿ: ಜೂಜಾಡುತ್ತಿದ್ದ 29 ಮಂದಿ ಸೆರೆ
64 ಸಾವಿರ ರೂ. ಜಪ್ತಿ
ಬೆಂಗಳೂರು, ಮಾ.22: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪದಡಿ ಕ್ಲಬ್ಯೊಂದರ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು, 29 ಮಂದಿಯನ್ನು ಬಂಧಿಸಿ, ಒಟ್ಟು 64 ಸಾವಿರ ರೂ. ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಪ್ಯಾಲೇಸ್ ಗುಟ್ಟಹಳ್ಳಿ ನಾಯಕ ಸರ್ಕಲ್ನ 1ನೆ ಮಹಡಿಯಲ್ಲಿರುವ ಶ್ರೀಸಾಯಿ ಸಾಗರ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ನಲ್ಲಿ ಸದಸ್ಯರಲ್ಲದ ಕೆಲವು ಜನ ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
Next Story