ಮತದಾನ ಮಾಡಿದ ಖುಷಿಯಲ್ಲಿ ಶತಾಯುಷಿ ವಯೋವೃದ್ಧರು | Vartha Bharati- ವಾರ್ತಾ ಭಾರತಿ

---

ಮತದಾನ ಮಾಡಿದ ಖುಷಿಯಲ್ಲಿ ಶತಾಯುಷಿ ವಯೋವೃದ್ಧರು

ಬೆಂಗಳೂರು, ಎ.18: ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ 100 ವರ್ಷ ದಾಟಿದ ವೃದ್ಧರು ಕೂಡ ಮತ ಚಲಾಯಿಸಿ ಸಂಭ್ರಮಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಗುರುವಾರ 104 ವರ್ಷದ ವಯೋವೃದ್ಧೆ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಶತಾಯುಷಿ ಮಹದೇವಮ್ಮ ಹೊಸದುರ್ಗ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ಮತಗಟ್ಟೆ ಸಂಖ್ಯೆ 209 ರಲ್ಲಿ ಮತದಾನ ಮಾಡಿದ್ದಾರೆ.

ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮುತ್ತುಗದಹಳ್ಳಿ ಗ್ರಾಮದ ಶತಾಯುಷಿ ಮುನಿಯಮ್ಮ (106) ಅವರು ಕೂಡ ಮತದಾನ ಮಾಡಿದ್ದಾರೆ. ಮುನಿಯಮ್ಮ ಅವರು ಗ್ರಾಮದ 13ರ ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದಾರೆ. ಮೊಮ್ಮಗನ ಸಹಾಯದಿಂದ ಶತಾಯುಷಿ ಮುನಿಯಮ್ಮ ಮತದಾನ ಮಾಡಿದ್ದಾರೆ. ಶತಾಯುಷಿ ವಯಸ್ಸಿನಲ್ಲೂ ಮುನಿಯಮ್ಮನ ಉತ್ಸಾಹ ಕುಗ್ಗಿರಲಿಲ್ಲ.

ಮಂಡ್ಯ ಜಿಲ್ಲೆಯ ಮದ್ದೂರಿನ ದೊಡ್ಡರಸಿನಕೆರೆಯಲ್ಲಿ 102 ವರ್ಷದ ಚಿಕ್ಕಮಾಯಮ್ಮ ಅವರು ಮತ ಚಲಾಯಿಸಿದ್ದಾರೆ. ಚಿಕ್ಕಮಾಯಮ್ಮ ಅವರು ಮತಗಟ್ಟೆ ಕೇಂದ್ರಕ್ಕೆ ವೀಲ್ ಚೇರ್‌ನಲ್ಲಿ ಬಂದು ಮತದಾನ ಮಾಡಿದ್ದಾರೆ. ಚಿಕ್ಕಮಾಯಮ್ಮ ತಮ್ಮ ಮಕ್ಕಳ ಸಹಾಯದೊಂದಿಗೆ ಬಂದು ಮತದಾನ ಮಾಡಿದ್ದಾರೆ.

ಮಂಡ್ಯದ ಬೂತ್ ನಂಬರ್ 137ರಲ್ಲಿ 110 ವರ್ಷದ ನಿಂಗಮ್ಮ ಮತ ಚಲಾಯಿಸಿದ್ದಾರೆ. ನೂರರ ಗಡಿ ದಾಟಿದರೂ ನಿಂಗಮ್ಮ ಉತ್ಸಾಹದಿಂದ ಮತ ಹಾಕಿದ್ದಾರೆ. ನಿಂಗಮ್ಮ ಜೊತೆ 85 ವರ್ಷದ ಮುತ್ತಮ್ಮ ಕೂಡ ಮತದಾನ ಮಾಡಿದ್ದಾರೆ. ಶತಾಯುಷಿ ಅಜ್ಜಿಯಂದಿರು ಒಂದೇ ಆಟೋದಲ್ಲಿ ಬಂದು ಮತ ಚಲಾಯಿಸುವ ಮೂಲಕ ಯುವ ಜನತೆಗೆ ಮಾದರಿ ಆಗಿದ್ದಾರೆ.

ತುಮಕೂರಿನ ತುರುವೇಕೆರೆ ತಾಲೂಕಿನ ಚಾಕುವಳ್ಳಿಪಾಳ್ಯದಲ್ಲಿ 105 ವರ್ಷದ ದೊಡ್ಡತಾಯಮ್ಮ ತಮ್ಮ ಮತ ಚಲಾಯಿಸಿದ್ದಾರೆ. ಹೊನ್ನೇನಹಳ್ಳಿಯ ಮತಗಟ್ಟೆಯಲ್ಲಿ ದೊಡ್ಡತಾಯಮ್ಮ ಮತ ಚಲಾವಣೆ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮಂಗಳೂರಿನಲ್ಲೂ ಕೂಡ ನೂರು ವರ್ಷದ ಕೇಶವ ಕುಡ್ವಾ ಅವರು ಲೇಡಿಹಿಲ್ ಶಾಲೆಯಲ್ಲಿ ಮತದಾನ ಮಾಡಿದ್ದಾರೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top