ದ್ವಿತೀಯ ಪಿಯುಸಿ ಫಲಿತಾಂಶ: ಶೇ.72.73ರಷ್ಟು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉತ್ತೀರ್ಣ
ಬೆಂಗಳೂರು, ಎ. 23: 2018-19ನೆ ಶೈಕ್ಷಣಿಕ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿನ ಶೇ.72.73ರಷ್ಟು ವಿದ್ಯಾರ್ಥಿಗಳು ಉತ್ತೀರ್ಣಗೊಂಡಿರುತ್ತಾರೆ.
ಆ ಪೈಕಿ ಶೇ. 90ಕ್ಕೂ ಮೇಲ್ಪಟ್ಟು 2 ವಿದ್ಯಾರ್ಥಿಗಳು, ಶೇ.80ಕ್ಕೂ ಮೇಲ್ಪಟ್ಟು 9 ವಿದ್ಯಾರ್ಥಿಗಳು, ಶೇ.70ಕ್ಕೂ ಮೇಲ್ಪಟ್ಟು 16 ವಿದ್ಯಾರ್ಥಿಗಳು ಮತ್ತು ಶೇ.60ಕ್ಕೂ ಮೇಲ್ಪಟ್ಟು 19 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. (ಬಾಲಕ-ಶೇ.68.88 ಮತ್ತು ಬಾಲಕಿ-ಶೇ.76.74) ಫಲಿತಾಂಶ ಪಡೆದಿದ್ದಾರೆ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
Next Story