ಬೆಂಗಳೂರು: ಮೊಬೈಲ್ ಗೇಮ್ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ
ಬೆಂಗಳೂರು, ಜೂ.8: ಮೊಬೈಲ್ ಗೇಮ್ ವಿಚಾರಕ್ಕೆ ಯುವಕರ ನಡುವೆ ನಡೆದ ಗಲಾಟೆ ಓರ್ವನ ಹತ್ಯೆಯಲ್ಲಿ ಅಂತ್ಯವಾಗಿರುವ ಘಟನೆ ಇಲ್ಲಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಡೆನಗರದ ಶೇಕ್ಮಿಲನ್(32) ಹತ್ಯೆಗೀಡಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಶುಕ್ರವಾರ ರಾತ್ರಿ ಶೇಕ್ ಮಿಲನ್ ನಾಲ್ಕೈದು ಯುವಕರ ಜೊತೆಗೂಡಿ ಹಣವನ್ನು ಕಟ್ಟಿಕೊಂಡು ಮೊಬೈಲ್ನಲ್ಲಿ ಲೂಡೋ ಗೇಮ್ ಆಡುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಯುವಕರ ಮಧ್ಯೆ ಜಗಳ ಉಂಟಾಗಿ ಶೇಕ್ ಮಿಲನ್ ಗೆ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಆತನ ಸ್ನೇಹಿತರಾದ ಶಾಹಿಬ್, ಅಲಿ, ಸಾದತ್, ನಯಾಜ್, ಅಸು ಎಂಬುವರನ್ನು ಕೊಲೆಗೈದ ಆರೋಪದ ಮೇರೆಗೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Next Story