ಬೆಂಗಳೂರು: ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ದಾಳಿ- 53 ಮಂದಿ ಬಂಧನ
ಬೆಂಗಳೂರು, ಜೂ.29: ಕಾನೂನು ಬಾಹಿರವಾಗಿ ನಡೆಸುತ್ತಿದ್ದ ಡ್ಯಾನ್ಸ್ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 53 ಮಂದಿಯನ್ನು ಬಂಧಿಸಿ 1 ಲಕ್ಷ ರೂ. ಜಪ್ತಿ ಮಾಡಿದ್ದಾರೆ.
ಮದ್ಯದಂಗಡಿ(ಬಾರ್) ವ್ಯವಸ್ಥಾಪಕ ದಿನೇಶ್ (42), ಕ್ಯಾಶಿಯರ್ ದಿನೇಶ್ ಕುಮಾರ್ (41), ರಿಯಾಝ್ (52), ಪ್ರಕಾಶ್ ದತ್ ಜೋಷಿ(23), ಹೆಗ್ಯಾರಾಜ್ ಜೋಷಿ(23) ಸೇರಿದಂತೆ 48 ಮಂದಿ ಗಿರಾಕಿಗಳನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೀವನ ಭೀಮಾನಗರ ವ್ಯಾಪ್ತಿಯ ದೊಮ್ಮಲೂರು ರಿಂಗ್ ರಸ್ತೆಯಲ್ಲಿರುವ ಡಾನ್ಸ್ ಬಾರ್ನಲ್ಲಿ ಕಾನೂನು ನಿಯಮ ಉಲ್ಲಂಘಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ದಾಳಿ ಸಂದರ್ಭದಲ್ಲಿ ಸ್ಥಳೀಯ ಹಾಗೂ ಹೊರರಾಜ್ಯದ 74 ಮಹಿಳೆಯರನ್ನು ಸಿಸಿಬಿ ಪೊಲೀಸರು ರಕ್ಷಿಸಿದ್ದಾರೆ.
ಈ ಸಂಬಂಧ ಜೀವನ್ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story