9 ವರ್ಷದ ಪುತ್ರಿಯನ್ನು ಕೊಲೆಗೈದು ತಾಯಿ ಆತ್ಮಹತ್ಯೆ
ಬೆಂಗಳೂರು, ಜು.10: ತನ್ನ 9 ವರ್ಷದ ಪುತ್ರಿಯನ್ನು ಕೊಲೆಗೈದು, ತಾಯಿಯೊಬ್ಬಾಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಟ್ಟೂರಿನ ಅಕ್ಷಯ ನಗರದ ನಿವಾಸಿ ಸುರೇಶ್ಬಾಬು ಎಂಬುವರ ಪತ್ನಿ ಪ್ರಿಯಾ(36) ಎಂಬಾಕೆ ತನ್ನ ಪುತ್ರಿ ಪ್ರತೀಕ್ಷಾ ಅನ್ನು ಉಸಿರುಗಟ್ಟಿಸಿ ಕೊಲೆಗೈದು, ಬಳಿಕ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಕಳೆದ ಎರಡು ತಿಂಗಳ ಹಿಂದೆಯಷ್ಟೇ ಮಧುರೈನಿಂದ ಬೆಂಗಳೂರಿಗೆ ಕುಟುಂಬ ಸಮೇತರಾಗಿ ಬಂದು ಯಲಹಂಕದ ಅಕ್ಷಯನಗರದಲ್ಲಿ ವಾಸವಾಗಿದ್ದರು ಎನ್ನಲಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
.
Next Story