52 ಬಾರಿ ರಸ್ತೆ ನಿಯಮ ಉಲ್ಲಂಘಿಸಿದ ಡೆಲಿವರಿ ಬಾಯ್!
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.15: ಫುಡ್ ಡೆಲಿವರಿ ಬಾಯ್ ಓರ್ವ ಬರೋಬ್ಬರಿ 52 ಬಾರಿ ರಸ್ತೆ ನಿಯಮ ಉಲ್ಲಂಘಿಸಿ, 53ನೆ ಬಾರಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಫುಡ್ ಡೆಲಿವರಿ ಬಾಯ್ ಆನಂದ್ ಎಂಬುವರು ಹಲವು ಬಾರಿ ನಿಯಮ ಉಲ್ಲಂಘಿಸಿದ್ದು, ಇತ್ತೀಚಿಗೆ ಪೊಲೀಸರು ಹಿಡಿದು ನಿಲ್ಲಿಸಿ, ಬೈಕ್ ಸಂಖ್ಯೆ ಪರಿಶೀಲನೆ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.
ಸಿಗ್ನಲ್ ಜಂಪ್, ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿತ್ತು. ಹೀಗಾಗಿ ಒಟ್ಟು ದಂಡದ ಮೊತ್ತ 5,300 ರೂ.ಆಗಿದೆ. ಒಂದು ವೇಳೆ, ಜು.20ರ ಬಳಿಕ ಇಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ವಾಹನ ಮೋಟಾರು ಕಾಯ್ದೆ ತಿದ್ದುಪಡಿ ಅನ್ವಯ 10 ಪಟ್ಟು ದಂಡ ಪಾವತಿ ಮಾಡಬೇಕಾಗಿತ್ತು.
Next Story