ಎಸ್ಐಟಿ ವಶದಿಂದ ರೋಷನ್ ಬೇಗ್ ಬಿಡುಗಡೆ
ಬೆಂಗಳೂರು, ಜು.16: ಐಎಂಎ ಬಹುಕೋಟಿ ರೂ. ವಂಚನೆ ಹಗರಣಕ್ಕೆ ಸಂಬಂಧಿಸಿ ಸೋಮವಾರ ರಾತ್ರಿ ಎಸ್ಐಟಿ ವಶಕ್ಕೆ ಪಡೆದಿದ್ದ ಶಿವಾಜಿ ನಗರ ಶಾಸಕ, ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಜುಲೈ 19ರಂದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ರೋಷನ್ ಬೇಗ್ಗೆ ಎಸ್ಐಟಿ ಸೂಚಿಸಿದೆ ಎಂದು ತಿಳಿದುಬಂದಿದೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೋಷನ್ ಬೇಗ್, ಇದೆಲ್ಲಾ ರಾಜಕೀಯ ಪಿತೂರಿ. ನಾನೆಲ್ಲೋ ಓಡಿಹೋಗ್ತೀನಿ ಅಂದುಕೊಂಡು ಎಸ್ಐಟಿ ವಶಕ್ಕೆ ಪಡೆದಿದೆ. ಎಸ್ಐಟಿ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ.
Next Story