ಸ್ನಾನದ ಕೊಠಡಿಯಲ್ಲಿ ಬಿಎಂಟಿಸಿ ನಿರ್ವಾಹಕಿ ನಿಗೂಢ ಸಾವು
ಬೆಂಗಳೂರು, ಜು.16: ಮನೆಯ ಸ್ನಾನದ ಕೊಠಡಿಯಲ್ಲಿ ಬಿಎಂಟಿಸಿ ನಿರ್ವಾಹಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗದಗ ಮೂಲದ ಅನುಸೂಯ(41) ಮೃತ ನಿರ್ವಾಹಕಿ ಎಂದು ತಿಳಿದುಬಂದಿದೆ.
ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ನೆಲೆಸಿದ್ದ ಅವರು, ಬಿಎಂಟಿಸಿಯಲ್ಲಿ ನಿರ್ವಾಹಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ಎಂದಿನಂತೆ ಕೆಲಸಕ್ಕೆ ತೆರಳಿ ರಾತ್ರಿ ಮನೆಗೆ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.
ಮಂಗಳವಾರ ಅನುಸೂಯ ಸ್ನಾನದ ಕೊಠಡಿಯಲ್ಲಿ ಶವವಾಗಿದ್ದು, ಹಲವು ಶಂಕೆ ವ್ಯಕ್ತವಾಗಿವೆ. ಈ ಸಂಬಂಧ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story