ವಿಶ್ವಾಸಮತ: ವಿಧಾನಸೌಧ ತಲುಪಿದ ಬಿಜೆಪಿ ಶಾಸಕರು
ಚಿತ್ರ ಕೃಪೆ: ANI
ಬೆಂಗಳೂರು, ಜು.18: ವಿಧಾನ ಮಂಡಲ ಅಧಿವೇಶನದಲ್ಲಿ ಇಂದು ಮುಖ್ಯಮಂತ್ರಿ ವಿಶ್ವಾಸಮತ ಯಾಚನೆ ಮಾಡಲಿರುವ ಹಿನ್ನಲೆಯಲ್ಲಿ ಬಿಜೆಪಿ ಶಾಸಕರು ವಿಧಾನಸೌಧ ತಲುಪಿದ್ದಾರೆ.
ಬಿಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕರು ಆಗಮಿಸಿದರು.
ಈ ಸಂದರ್ಭ ಮಾಧ್ಯಮದೆದುರು ಮಾತನಾಡಿದ ಬಿ.ಎಸ್.ವೈ., ವಿಶ್ವಾಸಮತಕ್ಕೆ ಸೋಲುಂಟಾಗಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಾವು 105 ಶಾಸಕರಿದ್ದೇವೆ. ಕಾಂಗ್ರೆಸ್, ಜೆಡಿಎಸ್ ಸಂಖ್ಯಾಬಲ 100ಕ್ಕಿಂತ ಕಡಿಮೆ ಆಗುವ ಸಂಭವ ಜಾಸ್ತಿ ಇದೆ. ಬಿಜೆಪಿ 105 ಶಾಸಕ ಬಲ ಹೊಂದಿದೆ. ಕುಮಾರಸ್ವಾಮಿ ವಿಶ್ವಾಸ ಮತ ವಿರುದ್ದವಾಗಿ ಜನಾಭಿಪ್ರಾಯವಿದೆ. ಪಕ್ಷೇತರರು ಏನು ಮಾಡುತ್ತಾರೋ ಗೊತ್ತಿಲ್ಲ ಎಂದರು.
Next Story