ನಿಯಂತ್ರಣ ತಪ್ಪಿ ಬಿದ್ದ ಬೈಕ್: ಸವಾರ ಸ್ಥಳದಲ್ಲೇ ಮೃತ
ಬೆಂಗಳೂರು, ಸೆ.29: ಶರವೇಗವಾಗಿ ಸಾಗುತ್ತಿದ್ದ ಬೈಕ್ಯೊಂದು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಲ್ಲಿನ ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೆಪಿನಗರದ 16ನೇ ಮುಖ್ಯರಸ್ತೆಯ ದೀಪಕ್ ಹೆಡ್ವಿನ್ ಗುಣಸಾಲ್ವಿ (31) ಮೃತ ಬೈಕ್ ಸವಾರ ಎಂದು ಪೊಲೀಸರು ಗುರುತಿಸಿದ್ದಾರೆ.
ಕಾರು ಚಾಲಕರಾಗಿದ್ದ ದೀಪಕ್ ಹೆಡ್ವಿನ್ ಗುಣಸಾಲ್ವಿ ಮತ್ತು ಎರ್ವಿನ್ ಎಂಬುವರು ಬೈಕ್ನಲ್ಲಿ ಕಳೆದ ರಾತ್ರಿ ಮನೆಗೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಜೆಪಿನಗರ 7ನೆ ಕ್ರಾಸ್ನಿಂದ 4ನೆ ಕ್ರಾಸ್ ಮಾರ್ಗದ ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದ ದೀಪಕ್ ಹೆಡ್ವಿನ್ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ, ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರುವ ಜಯನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Next Story