ಬೆಂಗಳೂರು: ಕಾನ್ಸ್ಟೇಬಲ್ ವಿರುದ್ಧ ಮಹಿಳಾ ಪೇದೆ ದೂರು
ಬೆಂಗಳೂರು, ಅ.9: ಪೊಲೀಸ್ ಪೇದೆಯೊಬ್ಬ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿ ಮಹಿಳಾ ಪೊಲೀಸ್ ಪೇದೆ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ದೂರಿನಲ್ಲಿ ಏನಿದೆ?: ನಾನು(ಮಹಿಳಾ ಪೇದೆ) ಆಟೊಮೇಷನ್(ಟಿಎಂಸಿ)ನಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇದಕ್ಕೂ ಮೊದಲು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕೆಲಸದಲ್ಲಿದ್ದ ವೇಳೆ, ಇದೇ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಸಂತೋಷ್ ಕುಮಾರ್ ಮದುವೆಯಾಗುವುದಾಗಿ ಕೇಳಿದಾಗ ಅದನ್ನು ಕುಟುಂಬಸ್ಥರು ನಿರಾಕರಿಸಿದ್ದರು.
ಆದರೆ, ಸಂತೋಷ್ ಕೆಲಸಕ್ಕೆ ಹೋಗುವಾಗ ಹಿಂಬಾಲಿಸಿ ಮಾತನಾಡಿಸುತ್ತಿದ್ದು, ಬೆದರಿಕೆ ಕೂಡ ಹಾಕುತ್ತಿದ್ದಾರೆ. ನನ್ನ ಮನೆ ಬಳಿ ಮದ್ಯ ಸೇವಿಸಿ ಕೆಟ್ಟದಾಗಿ ನಿಂದಿಸಲು ಶುರು ಮಾಡಿದ್ದಾರೆ. ಅಷ್ಟೇ ಅಲ್ಲದೆ, ನನ್ನ ಮೇಲೆ ಹಲ್ಲೆ ಕೂಡ ನಡೆಸಿದ್ದಾರೆ. ಹೀಗಾಗಿ, ಸಂತೋಷ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
Next Story