ಕ್ರೇನ್ ಢಿಕ್ಕಿ; ರಸ್ತೆ ದಾಟುತ್ತಿದ್ದ ಮಹಿಳೆ ಸಾವು
ಬೆಂಗಳೂರು, ಜ.18: ರಸ್ತೆ ದಾಟುತ್ತಿದ್ದ ಮಹಿಳೆಯ ಮೇಲೆ ಕ್ರೇನ್ ಹರಿದು ಮೃತಪಟ್ಟಿರುವ ಘಟನೆ ಇಲ್ಲಿನ ಜಾಲಹಳ್ಳಿ ಕ್ರಾಸ್ ಬಳಿ ಶನಿವಾರ ಮುಂಜಾನೆ ನಡೆದಿದೆ.
ಚೊಕ್ಕಸಂದ್ರದ ರುಕ್ಮಿಣಿಯಮ್ಮ (68) ಮೃತ ಮಹಿಳೆ ಎಂದು ತಿಳಿದುಬಂದಿದೆ.
ನಗರದ 8ನೆ ಮೈಲಿ ಬಳಿಯ ರಾಮಯ್ಯ ಬಿಲ್ಡಿಂಗ್ನಲ್ಲಿ ಸೂಪರ್ವೈಸರ್ ಆಗಿದ್ದ ರುಕ್ಮಿಣಿಯಮ್ಮ, ಶನಿವಾರ ಬೆಳಗ್ಗೆ 8ರ ವೇಳೆ ಜಾಲಹಳ್ಳಿ ಕ್ರಾಸ್ ಬಳಿ ಗ್ರಿಲ್ ಹತ್ತಿಳಿದು ರಸ್ತೆ ದಾಟುತ್ತಿದ್ದರು. ಈ ವೇಳೆ ಜಾಲಹಳ್ಳಿ ಕ್ರಾಸ್ನಿಂದ ಚೊಕ್ಕಸಂದ್ರ 8ನೆ ಮೈಲಿ ಕಡೆಗೆ ಹೋಗುತ್ತಿದ್ದ ಕ್ರೇನ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ರುಕ್ಮಿಣಿಯಮ್ಮಾ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಠಾಣಾ ಪೊಲೀಸರು ಕ್ರೇನ್ ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
Next Story