ಟೈಕೊಂಡೋ, ಪುಮ್ಸೆ ಚಾಂಪಿಯನ್ ಶಿಪ್: ಕಲ್ಲಡ್ಕದ ಮುಹಮ್ಮದ್ ಶಾಮಿಲ್ ಗೆ ಚಿನ್ನದ ಪದಕ
ಬೆಂಗಳೂರು, ಜ.19: ಬೆಂಗಳೂರಿನಲ್ಲಿ ರವಿವಾರ ನಡೆದ 3ನೇ ವರ್ಷದ ವೀಫಾ ಕಪ್ ಸೌತ್ ಝೋನ್ ಟೈಕೊಂಡೋ ಮತ್ತು ಪುಮ್ಸೆ ಚಾಂಪಿಯನ್ ಶಿಪ್ ನ 32 ಕೆ.ಜಿ. ವಿಭಾಗದಲ್ಲಿ ಕಲ್ಲಡ್ಕದ ಮುಹಮ್ಮದ್ ಶಾಮಿಲ್ ಚಿನ್ನದ ಪದಕ ಪಡೆದಿದ್ದಾರೆ.
ಕಲ್ಲಡ್ಕ ಗೋಲ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ನಲ್ಲಿ 5ನೇ ತರಗತಿ ವಿದ್ಯಾರ್ಥಿಯಾದ ಮುಹಮ್ಮದ್ ಶಾಮಿಲ್, ನಾರಂಕೋಡಿ ಮುಹಮ್ಮದ್ ಸಿದ್ದೀಕ್ ಮತ್ತು ಶಮೀಮಾ ದಂಪತಿಯ ದ್ವಿತೀಯ ಪುತ್ರ. ಇವರು ಇಸಾಕ್ ನಂದಾವರ ಜೊತೆ ಟೈಕೊಂಡೋ ತರಬೇತಿ ಪಡೆಯುತ್ತಿದ್ದಾರೆ.
Next Story