ಟೈಕೊಂಡೋ, ಪುಮ್ಸೆ ಚಾಂಪಿಯನ್ ಶಿಪ್: ಮುಹಮ್ಮದ್ ಸುಹೈಲ್ ಗೆ ಚಿನ್ನ, ಬೆಳ್ಳಿ ಪದಕ
ಬೆಂಗಳೂರು, ಜ.21: ಬೆಂಗಳೂರಿನಲ್ಲಿ ರವಿವಾರ ನಡೆದ 3ನೇ ವರ್ಷದ ವೀಫಾ ಕಪ್ ಸೌತ್ ಝೋನ್ ಟೈಕೊಂಡೋ ಮತ್ತು ಪುಮ್ಸೆ ಚಾಂಪಿಯನ್ ಶಿಪ್ ನ 68 ಕೆ.ಜಿ. ವಿಭಾಗದಲ್ಲಿ ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನ ಮುಹಮ್ಮದ್ ಸುಹೈಲ್ ಚಿನ್ನ ಹಾಗೂ ಬೆಳ್ಳಿಯ ಪದಕ ಪಡೆದಿದ್ದಾರೆ.
ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಮುಹಮ್ಮದ್ ಸುಹೈಲ್, ಅಬ್ದುಲ್ಲಾ ಹಾಜಿ ಮತ್ತು ಆಯಿಶಾ ದಂಪತಿಯ ಪುತ್ರ. ಇವರು ಇಸಾಕ್ ನಂದಾವರ ಜೊತೆ ಟೈಕೊಂಡೋ ತರಬೇತಿ ಪಡೆಯುತ್ತಿದ್ದಾರೆ.
Next Story