ಬೆಂಗಳೂರು: ಪತಿ ಮೇಲೆ ಕುದಿಯುತ್ತಿದ್ದ ಎಣ್ಣೆ ಎರಚಿದ ಪತ್ನಿ
ಬೆಂಗಳೂರು, ಫೆ.10: ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪತಿಯ ನಡೆಯಿಂದ ಬೇಸತ್ತ ಮಹಿಳೆ ಕುದಿಯುತ್ತಿದ್ದ ಅಡುಗೆ ಎಣ್ಣೆಯನ್ನು ಪತಿ ಮುಖಕ್ಕೆ ಎರಚಿರುವ ಘಟನೆ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಯಶವಂತಪುರದ ಮೋಹನ್ಕುಮಾರ್ ನಗರದ ಮಂಜುನಾಥ್(40), ಪತ್ನಿಯಿಂದ ಹಲ್ಲೆಗೆ ಒಳಗಾದವರು. ಕೃತ್ಯವೆಸಗಿದ ಪತ್ನಿ ಪದ್ಮ್ಮಾ(36) ಎಂಬಾಕೆಯನ್ನು ಇಲ್ಲಿನ ಯಶವಂತಪುರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರವಿವಾರ ಬೆಳಗ್ಗೆ ಪದ್ಮಾ ಮನೆಯಲ್ಲಿ ಅಡುಗೆ ಮಾಡುತ್ತಿದ್ದರು. ಈ ವೇಳೆ ಮದ್ಯ ಸೇವಿಸಿ ಬಂದಿದ್ದ ಮಂಜುನಾಥ್ ಗಲಾಟೆ ನಡೆಸಿ, ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಮಾನಸಿಕ ಮತ್ತು ದೈಹಿಕ ಹಲ್ಲೆಯಿಂದ ಬೇಸತ್ತಿದ್ದ ಮಹಿಳೆ, ಕುದಿಯುತ್ತಿದ್ದ ಅಡುಗೆ ಎಣ್ಣೆಯನ್ನು ತೆಗೆದು ಪತಿ ಮುಖಕ್ಕೆ ಎರಚಿದ್ದು, ಮಂಜುನಾಥ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Next Story