ಕೆಎಸ್ಆರ್ಟಿಸಿ: ವರ್ಗಾವಣೆ ದಿನಾಂಕ ವಿಸ್ತರಣೆ
ಬೆಂಗಳೂರು, ಮಾ.11: ರಾಜ್ಯ ರಸ್ತೆ ಸಾರಿಗೆ ನಿಗಮದ ಸಂಚಾರ ಮತ್ತು ತಾಂತ್ರಿಕ ಇಲಾಖೆಯ ಅಂತರ ವಿಭಾಗ ಮತ್ತು ವಿಭಾಗ ಮಟ್ಟದ ದರ್ಜೆ-3 ಮೇಲ್ವಿಚಾರಕೇತರ ನೌಕರರ ವರ್ಗಾವಣೆಯನ್ನು ಮಾ.31ರವರೆಗೆ ವಿಸ್ತರಿಸಲಾಗಿದೆ.
ಖಾಲಿ ಸ್ಥಾನಗಳ ಲಭ್ಯತೆ ಹಾಗೂ ನಿಗಮದ ಅವಶ್ಯಕತೆಗನುಗುಣವಾಗಿ ಸರಳಗೊಳಿಸುವ ಹಾಗೂ ಪಾರದರ್ಶಕ ವರ್ಗಾವಣೆ ಕೈಗೊಳ್ಳುವ ಉದ್ದೇಶದಿಂದ ವಿಸ್ತರಿಸಲಾಗಿದ್ದು, ಸಂಚಾರ ಮತ್ತು ತಾಂತ್ರಿಕ ಇಲಾಖೆಯ ಮುಖ್ಯಸ್ಥರು ಏ.5ರಂದು ವರ್ಗಾವಣೆ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಂಬಂಧಪಟ್ಟ ವೆಬ್ಸೈಟ್ನಲ್ಲಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು 5 ದಿನಗಳ ಕಾಲಾವಕಾಶ ನೀಡಿ ಏ.30ರಂದು ವರ್ಗಾವಣೆ ಪ್ರಕ್ರಿಯೆಯನ್ನು ನಿಯಾಮಾನುಸಾರ ಮುಕ್ತಗೊಳಿಸಲಿದ್ದಾರೆ.
ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸುವವರಿಗೆ ವರ್ಗಾವಣೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆನ್ಲೈನ್ ಮೂಲಕ ಮಾ.15ರವರೆಗೆ ಅವಕಾಶ ಕಲ್ಪಿಸಲಾಗಿದೆ. ವಾಯವ್ಯ ಸಂಚಾರ ಇಲಾಖೆಯ ಚಾಲಕ, ನಿರ್ವಾಹಕರಿಗೆ ವರ್ಗಾವಣೆ ಅರ್ಜಿಯನ್ನು ಮಾ.25ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.
ಈಶಾನ್ಯ ಸಾರಿಗೆ ಇಲಾಖೆಯ ಎಲ್ಲ ದರ್ಜೆ-30ಮೇಲ್ವಿಚಾರಕೇತರ ಮತ್ತು ದರ್ಜೆ-4ರ ಸಿಬ್ಬಂದಿಗಳು ವರ್ಗಾವಣೆ ಅರ್ಜಿಗಳನ್ನು ಆನ್ಲೈನ್ ಮುಖಾಂತರ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಜಾರಿಯಲಿದ್ದು, ಮಾ.22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಪ್ರಕಟನೆ ತಿಳಿಸಿದೆ.