ಬೆಂಗಳೂರು: 'ನನಗೆ ಕೊರೋನ ಇದೆ, ಆಸ್ಪತ್ರೆಗೆ ದಾಖಲಿಸಿ' ಎಂದು ಪೊಲೀಸ್ ಠಾಣೆಗೆ ಬಂದ ಯುವಕ
ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.27: ಕೊರೋನ ಸೋಂಕು ತಗಲಿರುವ ಅನುಮಾನವಿದ್ದು, ಈ ಕೂಡಲೇ ನನ್ನನ್ನು ಆಸ್ಪತ್ರೆಗೆ ದಾಖಲಿಸಿ ಎಂದು ಇಲ್ಲಿನ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಬಂದು ಯುವಕನೋರ್ವ ಮನವಿ ಮಾಡಿದ್ದಾನೆ.
ವೃತ್ತಿಯಲ್ಲಿ ಪೇಂಟರ್ ಕೆಲಸ ಮಾಡುವ ಯುವಕ, ತಾನು ಪುಟ್ಟೇನಹಳ್ಳಿ ನಿವಾಸಿ ಎಂದು ಮಾಹಿತಿ ನೀಡಿದ್ದಾನೆ. ನನಗೆ ಕೊರೋನ ಸೋಂಕು ಬಂದಿದೆ. ದಯಮಾಡಿ ನನಗೆ ಚಿಕಿತ್ಸೆ ಕೊಡಿಸಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾನೆ.
ಶುಕ್ರವಾರ ಯುವಕನನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ. ಆತಂಕದಿಂದಲೇ ಪೊಲೀಸರು ಆಸ್ಪತ್ರೆಗೆ ದಾಖಲಿಸಿದರು ಎಂದು ಹೇಳಲಾಗುತ್ತಿದೆ.
Next Story