ಲಾಕ್ಡೌನ್: ಸಿಗರೇಟ್, ಪಾನ್ ಮಸಾಲಾ ಮಾರಾಟ ನಿಷೇಧಿಸಿದ ಬಿಬಿಎಂಪಿ
ಬೆಂಗಳೂರು, ಎ.22: ಕೊರೋನ ವೈರಸ್ ಲಾಕ್ಡೌನ್ ಹಿನ್ನೆಲೆ ಸಿಗರೇಟ್, ಪಾನ್ ಮಸಾಲಾ ಹಾಗೂ ಬೀಡಾ ಮಾರಾಟವನ್ನು ಬಿಬಿಎಂಪಿ ನಿಷೇಧಿಸಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಗತ್ಯ ವಸ್ತುಗಳ ಮಾರಾಟ ಹೊರತುಪಡಿಸಿ ಇಂತಹ ವಸ್ತುಗಳನ್ನು ಮಾರಿದರೆ ಅಂತಹ ಮಳಿಗೆ ಮಾಲಕರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೊರೋನ ಲಾಕ್ಡೌನ್ ಇರುವವರೆಗೂ ಯಾರೂ ಸಿಗರೇಟ್, ಪಾನ್ ಮಸಾಲಾ ಹಾಗೂ ಬೀಡಾ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಅಂತವರ ಮಳಿಗೆಯ ಪರವಾನಗಿಯನ್ನೂ ರದ್ದು ಮಾಡಲಾಗುವುದು ತಿಳಿಸಿದ್ದಾರೆ.
Next Story