ಚಿಕ್ಕಬಳ್ಳಾಪುರ: 21ಕ್ಕೇರಿದ ಸೋಂಕಿತರ ಸಂಖ್ಯೆ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೋನ ಸೋಂಕಿನ ಸರಣಿ ಮುಂದುವರಿದಿದ್ದು, ಸೋಮವಾರ ಮತ್ತೊಂದು ಪ್ರಕರಣ ದೃಢವಾಗುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 21ಕ್ಕೆ ಏರಿದ್ದು, ಸೋಮವಾರ ಸೋಂಕು ದೃಢಪಟ್ಟ ವ್ಯಕ್ತಿಯೂ 17ನೇ ವಾರ್ಡಿಗೆ ಸೇರಿದ್ದು, ಪ್ರಸ್ತುತ ವಾರ್ಡಿನ ಪ್ರತಿಯೊಬ್ಬರನ್ನೂ ತಪಾಸಣೆ ಒಳಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಸೋಂಕಿತರೆಲ್ಲರೂ ಒಂದೇ ವಾರ್ಡಿಗೆ ಸೇರಿದವರಾಗಿರುವುದರಿಂದ ನಗರದ ಜನತೆಯಲ್ಲಿ ಸ್ವಲ್ಪಮಟ್ಟಿಗೆ ಆತಂಕವು ದೂರ ಮಾಡಿದ್ದು, ಕಳೆದ ಶುಕ್ರವಾರ ಸೋಂಕು ಪತ್ತೆಯಾಗಿದ್ದ ಮಹಿಳೆಯ ಅಳಿಯನಿಗೆ ಸೋಂಕು ಇರುವುದು ಸೋಮವಾರ ದೃಢಪಟ್ಟಿದ್ದು, 30 ವರ್ಷದ ವ್ಯಕ್ತಿಗೆ ಚಿಕ್ಕಬಳ್ಳಾಪುರ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
Next Story