ಕೊರೋನ ಅಟ್ಟಹಾಸ ನಡುವೆ ಬಿಜೆಪಿ ಅಧ್ಯಕ್ಷನ ಹುಟ್ಟುಹಬ್ಬ ಆಚರಣೆ
ಬೆಂಗಳೂರು, ಮೇ 26: ಕೊರೋನ ವೈರಸ್ ಸಿಲಿಕಾನ್ ಸಿಟಿಯನ್ನು ಬೆನ್ನು ಬಿಡದೇ ಕಾಡುತ್ತಿದ್ದು, ಇದರ ನಡುವೆಯೇ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಕೇಶವ ಸಾಮಾಜಿಕ ಅಂತರ ಮರೆತು ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ.
ಸಹೋದರನ ಹುಟ್ಟುಹಬ್ಬ ಆಚರಣೆಯಲ್ಲಿ ರಾಯಪುರಂ ವಾರ್ಡ್ ಕಾರ್ಪೊರೇಟರ್ ಶಶಿಕಲಾ ಭಾಗಿಯಾಗಿದ್ದಾರೆ. ಕೊರೋನ ಹಿನ್ನೆಲೆಯಲ್ಲಿ ಯಾವುದೇ ಸಂಭ್ರಮ, ಆಚರಣೆಗೆ ನಿಯಮಗಳನ್ನು ಹಾಕಲಾಗಿದೆ.
ಆದರೆ, ಸರಕಾರದ ನಿಯಮಗಳನ್ನು ಬಿಜೆಪಿ ಮಂಡಲ ಅಧ್ಯಕ್ಷರೇ ಉಲ್ಲಂಘಿಸಿ, ನೂರಾರು ಜನ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿದ್ದಾರೆ.
Next Story