ಬೆಂಗಳೂರು ವಿವಿ: ಪದವಿ ಪೂರೈಸಲಾಗದವರಿಗೆ ಮತ್ತೊಂದು ಅವಕಾಶ
ಬೆಂಗಳೂರು, ಜೂ.19: ಬೆಂಗಳೂರು ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜುಗಳಲ್ಲಿ 2014-15ನೇ ಶೈಕ್ಷಣಿಕ ಸಾಲಿನಲ್ಲಿ ನೋಂದಣಿಗೊಂಡು ನಿಗದಿ ಅವಧಿಯಲ್ಲಿ ಪದವಿ ಪೂರೈಸಲು ಸಾಧ್ಯವಾಗದ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ, ಬಿಬಿಎ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶವನ್ನು ಕಲ್ಪಿಸಲಾಗಿದೆ.
ಸ್ನಾತಕ ಪದವಿ ಕೋರ್ಸ್ನ 2, 4, 6, 8ನೇ ಸೆಮಿಸ್ಟರ್ ಜೂನ್, ಜುಲೈ 2020 ಮತ್ತು ನವೆಂಬರ್, ಡಿಸೆಂಬರ್ 2020ರ ಅವಧಿಯಲ್ಲಿ 1, 3, 5, 7ನೇ ಸೆಮಿಸ್ಟರ್ಗಳನ್ನು ನೋಂದಾಯಿಸಿ ಪರೀಕ್ಷೆ ಬರೆಯಲು ಒಂದು ಬಾರಿಗೆ ಮಾತ್ರ ಅವಕಾಶ ನೀಡಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ಪರೀಕ್ಷಾ ಶುಲ್ಕ ಅಧಿಸೂಚನೆ ಹೊರಡಿಸಿದಾಗ ಅಭ್ಯರ್ಥಿಗಳು ಪರೀಕ್ಷಾ ಶುಲ್ಕವನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಮೂಲಕ ಪಾವತಿಸಬೇಕಾಗಿರುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story