ಭೂಗತ ಪಾತಕಿ ರವಿ ಪೂಜಾರಿಯ ಮತ್ತೊಬ್ಬ ಸಹಚರ ಸಿಸಿಬಿ ಬಲೆಗೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.22: ಭೂಗತ ಪಾತಕಿ ರವಿ ಪೂಜಾರಿಯ ಮತ್ತೊಬ್ಬ ಸಹಚರನನ್ನು ಸಿಸಿಬಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಯೂಸುಫ್ ಯಾನೆ ಬಚ್ಚ ಖಾನ್ ಬಂಧಿತ ಆರೋಪಿಯಾಗಿದ್ದು, ಈತ ಶಾರ್ಪ್ ಶೂಟರ್ ಸಹ ಆಗಿದ್ದಾನೆ ಎಂದು ತಿಳಿದುಬಂದಿದೆ.
ಈ ಹಿಂದೆ ಛೋಟಾ ರಾಜನ್ ಸಹಚರನಾಗಿದ್ದ ಯೂಸುಫ್, ಬಳಿಕ ರವಿ ಪೂಜಾರಿ ಜೊತೆ ಸೇರಿಕೊಂಡು ನಗರದಲ್ಲಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜ್ ಕೊಲೆ ಪ್ರಕರಣದಲ್ಲಿ ಬಹು ಮುಖ್ಯ ಪಾತ್ರವಹಿಸಿದ್ದ. ಈ ವಿಚಾರದಲ್ಲಿ ರವಿ ಪೂಜಾರಿಯನ್ನು ವಶಕ್ಕೆ ಪಡೆದು ಸಿಸಿಬಿ ವಿಚಾರಣೆ ನಡೆಸಿದಾಗ ಮಾಹಿತಿ ಬೆಳಕಿಗೆ ಬಂದಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
Next Story