ಸಿನಿಮಾ ವಿತರಕ ಎಂ.ವಿ.ಸುಬ್ರಹ್ಮಣ್ಯ ನಿಧನ
ಬೆಂಗಳೂರು, ಜೂ.25: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರು ಆಗಿದ್ದ ವಿತರಕ ಎಂ.ವಿ.ಸುಬ್ರಹ್ಮಣ್ಯ(85) ಅವರು ಗುರುವಾರ ನಿಧನರಾಗಿದ್ದಾರೆ
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸುಬ್ರಹ್ಮಣ್ಯ ಅವರು ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಮೃತರು 80, 90ರ ದಶಕದಲ್ಲಿ ಹಲವು ಕನ್ನಡ ಸಿನಿಮಾಗಳಿಗೆ ನಿರ್ಮಾಪಕರಾಗಿದ್ದರು. ಚಿತ್ರರಂಗದ ನಿರ್ಮಾಪಕರಿಗೆ ಮಾರ್ಗದರ್ಶಕರೂ ಆಗಿದ್ದ ಸುಬ್ರಹ್ಮಣ್ಯ ಅವರ ನಿಧನಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂತಾಪ ಸೂಚಿಸಿದೆ.
Next Story