ಮಾಸ್ಕ್ ಇಲ್ಲದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲು: ಭಾಸ್ಕರ್ ರಾವ್
ಬೆಂಗಳೂರು, ಜೂ.29: ಕೋವಿಡ್-19 ಸೋಂಕಿನ ಕುರಿತು ನಿರ್ಲಕ್ಷ್ಯವಹಿಸಿ ಮಾಸ್ಕ್ ಧರಿಸದೆ ಓಡಾಟ ನಡೆಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಮಾಸ್ಕ್ ಸಂಬಂಧ ಈಗಾಗಲೇ ಬಿಬಿಎಂಪಿ ಹಾಗೂ ಮಾರ್ಷಲ್ಗಳು, ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಆಯಾ ವಿಭಾಗದ ಡಿಸಿಪಿಗಳು ಕೂಡ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಾರಾದರೂ ಮಾಸ್ಕ್ ಹಾಕಿಲ್ಲ ಎಂದರೆ ಕ್ರಿಮಿನಲ್ ಕೇಸ್ ದಾಖಲಿಸಿ. ಎಲ್ಲ ಬೆಂಗಳೂರು ಜನತೆ ಮಾಸ್ಕ್ ಧರಿಸಬೇಕು. ಒಂದು ವೇಳೆ, ಯಾರಾದರೂ ಮಾತು ಕೇಳಿಲ್ಲ ಎಂದರೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಅವರು ಹೇಳಿದ್ದಾರೆ.
Next Story