ಎಸ್ಸೆಸ್ಸೆಫ್ ಕ್ಯೂಟೀಂಗ್ರಾಟಿಟ್ಯೂಡ್ ವೆಬಿನಾರ್ ಆರಂಭ
ಬೆಂಗಳೂರು, ಜು.1: ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಕ್ಯೂಟೀಂಗ್ರಾಟಿಟ್ಯೂಡ್ ವೆಬಿನಾರ್ ಸಿರೀಸ್ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮವನ್ನು ಇಶಾರ ಪಾಕ್ಷಿಕದ ಪ್ರಧಾನ ಸಂಪಾದಕ ಕೆಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಿದರು.
ಜು.1 ರಿಂದ 19ರವರೆಗೆ ಆನ್ಲೈನ್ ಮೂಲಕ ನಡೆಯಲಿರುವ ಆಟಿಟ್ಯೂಡ್ ವೆಬಿನಾರ್ ಸಿರೀಸ್ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತವಿರುವ ಎಸ್ಸೆಸ್ಸೆಫ್ ನಾಯಕರು, ಕ್ಯೂಟೀಂಕೋಡಿನೇಟರ್ಸ್, ಡೈರೆಕ್ಟರ್ಸ್, ಮೆಂಟರ್ಸ್ ಹಾಗೂ ಟ್ಯೂಟರ್ಸ್ಗಳು ಭಾಗವಹಿಸಲಿದ್ದಾರೆ.
ಅಂತರ್ ರಾಷ್ಟ್ರೀಯ ಮನಶ್ಶಾಸ್ತ್ರಜ್ಞ, ಹೀಲಿಂಗ್ ಲೈಟ್ ಇಂಟನ್ರ್ಯಾಷನಲ್ ಕಾಲಿಕಟ್ ಇದರ ಚೇರ್ಮಾನ್ ಅಬ್ದು ಮಾನಿಪುರಂ ವೆಬಿನಾರ್ ಕಾರ್ಯಾಗಾರವನ್ನು ಮುನ್ನಡೆಸಲಿದ್ದಾರೆ. ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯಿದ್ ಸಿಟಿಎಂ ಅಸ್ಸಖಾಫ್ ಮದನಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ ಪ್ರಾಸ್ತಾವಿಕ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿಗಳಾದ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಅಶ್ರಫ್ರಝಾ ಅಂಜದಿ ಪಕ್ಷಿಕೆರೆ, ರಾಜ್ಯ ನಾಯಕರಾದ ಮುನೀರ್ ಅಹ್ಮದ್ಕಾಮಿಲ್ ಸಖಾಫಿ ಉಳ್ಳಾಲ, ಕೊಂಬಾಳಿ ಕೆ.ಎಂ.ಎಚ್ಝುಹ್ರಿ, ಮುನೀರ್ ಮದನಿ ಮೈಸೂರು, ಮುಬಶ್ಶಿರ್ ಅಹ್ಸನಿ ಕೊಡಗು ಹಾಗೂ ಜಿಲ್ಲಾ ನಾಯಕರು ಭಾಗವಹಿಸಿದರು.