ಕೊರೋನ ವೈರಸ್ ಗೆ ಏಳು ತಿಂಗಳ ಹಸುಗೂಸು ಬಲಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.5: ಚಿಕಿತ್ಸೆ ಫಲಿಸದೆ ಏಳು ತಿಂಗಳ ಹಸುಗೂಸು ಕೊರೋನಗೆ ಬಲಿಯಾಗಿರುವ ಘಟನೆ ಬೆಳ್ಳಂದೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಮಗುವಿನ ತಂದೆ-ತಾಯಿಗೆ ಕೊರೋನ ದೃಢಪಟ್ಟಿದ್ದು, ಇವರಿಬ್ಬರೂ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಗುವಿನ ಮೃತದೇಹವನ್ನು ಆರೋಗ್ಯ ಸಿಬ್ಬಂದಿ ಆ್ಯಂಬುಲೆನ್ಸ್ ನಲ್ಲಿ ತೆಗೆದುಕೊಂಡು ಬಂದು ಅಂತ್ಯಕ್ರಿಯೆ ನಡೆಸಿದ್ದಾರೆ.
ಈ ಘಟನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹ ಕಣ್ಣೀರು ಹಾಕಿದ ಘಟನೆ ನಡೆಯಿತು. ಚಿತಾಗಾರದ ನಿರ್ವಹಣೆ ಮಾಡುವ ಸುರೇಶ್ ಎಂಬವರು, ಸರಕಾರಿ ಶುಲ್ಕವನ್ನು ಪಡೆಯದೆ, ತಾವೇ ಸ್ವತಃ ಶುಲ್ಕ ಭರಿಸಿದ್ದಾರೆ.
Next Story