ರೈಲ್ವೆಯ ಹಲವು ಪೊಲೀಸರಿಗೆ ಕೊರೋನ ಸೋಂಕು ದೃಢ
ಬೆಂಗಳೂರು, ಜು.13: ಲಾಕ್ಡೌನ್ ಸಂಬಂಧ ವಲಸೆ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ತೆರಳುವ ವೇಳೆ ವ್ಯವಸ್ಥೆ ಕಲ್ಪಿಸಿ ಸೇವೆ ಸಲ್ಲಿಸಿದ್ದ ಕೆಲ ರೈಲ್ವೇ ಪೊಲೀಸ್ ಸಿಬ್ಬಂದಿಗಳಿಗೆ ಕೊರೋನ ಸೋಂಕು ತಗಲಿದೆ ಎಂದು ಹೇಳಲಾಗುತ್ತಿದೆ.
ನಗರದ ರೈಲ್ವೆ ಎಸ್ಪಿ ಕಚೇರಿಯ 5 ಮಂದಿಗೆ, ಸಂಗೊಳ್ಳಿ ರಾಯಣ್ಣ ಪೊಲೀಸ್ ಠಾಣೆಯ 5 ಸಿಬ್ಬಂದಿಗೆ, ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯ ಐವರು ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಹತ್ತು ದಿನದ ಹಿಂದೆಯೇ ಪೊಲೀಸರಿಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ, ಆರೋಗ್ಯ ಇಲಾಖೆಯ ಎಡವಟ್ಟಿನಿಂದಾಗಿ ವರದಿ ತಡವಾಗಿ ಬಂದಿದೆ. ಈ ಮಧ್ಯೆ ಸೋಂಕಿತ ಸಿಬ್ಬಂದಿಯ ಸಂಪರ್ಕ ಜಾಲ ಕೂಡ ದೊಡ್ಡದಾಗಿದ್ದು, ನೂರಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
Next Story