ಕೊರೋನ ಅಧಿಕವಾಗಿರುವ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಸ್ಯಾನಿಟೈಸ್ ಸಿಂಪಡಣೆ
ಬೆಂಗಳೂರು, ಜು.15: ಕೊರೋನ ಸೋಂಕಿನ ಪ್ರಮಾಣ ಅಧಿಕವಾಗಿರುವ ಪ್ರದೇಶಗಳಲ್ಲಿ ಡ್ರೋನ್ ಮೂಲಕ ರಾಸಾಯನಿಕ ಸಿಂಪಡಿಸಲು ಪೊಲೀಸರು ಮುಂದಾಗಿದ್ದಾರೆ.
ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯ ಎಂಐಟಿ ವಿಭಾಗದ ತಂಡವು ಆವಿಷ್ಕರಿಸಿರುವ ಬಹುಯೋಪಯೋಗಿ ಡ್ರೋನ್ ಸಹಾಯದಿಂದ ನಗರದ ದಕ್ಷಿಣ ವಿಭಾಗದ ಪೊಲೀಸರು, ರಾಸಾಯನಿಕ ಸಿಂಪಡಣೆ ಮಾಡಲಿದ್ದಾರೆ. ಪ್ರಾಯೋಗಿಕವಾಗಿ ಬುಧವಾರ ಇಲ್ಲಿನ ದಕ್ಷಿಣ ವಿಭಾಗದಲ್ಲಿ ಡ್ರೋನ್ ಮೂಲಕ ರಾಸಾಯನಿಕ ಸಿಂಪಡಿಸಲು ಯೋಜನೆ ರೂಪಿಸಿಕೊಂಡಿದ್ದಾರೆ.
Next Story