ಪಠ್ಯ ಕಡಿತ: ವೆಬ್ಸೈಟ್ ತಾತ್ಕಾಲಿಕವಾಗಿ ತಡೆ
ಬೆಂಗಳೂರು, ಜು. 30: ಕೋವಿಡ್-19ರ ಕಾರಣದಿಂದ 2020-21 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭ ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ 1 ರಿಂದ 10 ನೇ ತರಗತಿಯ ಎಲ್ಲ ವಿಷಯಗಳ ಪಠ್ಯಾಂಶಗಳನ್ನು ಇಲಾಖಾ ನಿರ್ದೇಶನದಂತೆ 120 ಶಾಲಾ ಕೆಲಸದ ದಿನಗಳಿಗೆ ಕಡಿತಗೊಳಿಸಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಸೂಚನೆಯಂತೆ ಸದರಿ ಪ್ರಕಟಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಕಟಣೆ ತಿಳಿಸಿದೆ.
Next Story