ಮಾದಕ ವಸ್ತು ಮಾರಾಟ ಮಾಡುತ್ತಿದ್ದ 22 ಪೆಡ್ಲರ್ ಗಳ ಸೆರೆ
ಬೆಂಗಳೂರು, ಜು.31: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಡಿ ಪೆಡ್ಲರ್ ಗಳನ್ನು ಇಲ್ಲಿನ ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ದಕ್ಷಿಣ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜು. 27 ರಿಂದ 30 ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಒಟ್ಟು 22 ಆರೋಪಿಗಳನ್ನು ಬಂಧಿಸಿ ಅವರ ವಿರುದ್ದ ಒಟ್ಟು ಎನ್ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರಿಂದ ವಶದಿಂದ 2 ಲಕ್ಷ ಮೌಲ್ಯದ ಒಟ್ಟು 4 ಕೆ.ಜಿ. 650 ಗ್ರಾಂ ಗಾಂಜಾ ಮತ್ತು ಒಂದು ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ವಿಭಾಗದ ತಲಘಟ್ಟಪುರ ಪೊಲೀಸರು - 2 , ಸಿದ್ದಾಪುರ ಪೊಲೀಸರು - 1, ಕೋಣನಕುಂಟೆ ಪೊಲೀಸರು - 5 , ಬನಶಂಕರಿ ಪೊಲೀಸರು - 4 , ಸಿ.ಕೆ. ಅಚ್ಚುಕಟ್ಟು ಪೊಲೀಸರು - 2 ಪೊಲೀಸರು, ಬಸವನಗುಡಿ ಪೊಲೀಸರು -1 , ಗಿರಿನಗರ ಪೊಲೀಸರು – 2, ಪುಟ್ಟೇನಹಳ್ಳಿ ಪೊಲೀಸರು -1 ಮತ್ತು ಸುಬ್ರಮಣ್ಯಪುರ ಪೊಲೀಸರು – 1 ಪ್ರಕರಣ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story