ಕ್ರಿಕೆಟ್ ಬೆಟ್ಟಿಂಗ್ ಆರೋಪ: ಮೂವರ ಸೆರೆ, 9.50 ಲಕ್ಷ. ರೂ ನಗದು ಜಪ್ತಿ
ಬೆಂಗಳೂರು, ಸೆ.27: ಹಣ ಪಣವಾಗಿ ಕಟ್ಟಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಆರೋಪದಡಿ ಮೂವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 9.50 ಲಕ್ಷ ರೂ ನಗದನ್ನು ಜಪ್ತಿ ಮಾಡಿದ್ದಾರೆ
ನಗರ್ತ ಪೇಟೆಯ ಭಾವೇಶ್ ಜೈನ್(38), ಅರವಿಂದ್ ಜೈನ್(40), ಬಿನ್ನಿಮಿಲ್ ವೃತ್ತದ ವಿಮಲ್ ಜೈನ್(40) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಗಾಂಧಿನಗರ 5ನೇ ಮುಖ್ಯರಸ್ತೆಯ ಹೊಟೇಲ್ವೊಂದರ ಮುಂಭಾಗ ಡೆಲ್ಲಿ ಮತ್ತು ಚೆನ್ನೈ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಮೊಬೈಲ್ನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಬೆಟ್ಟಿಂಗ್ ನಡೆಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Next Story