ಪರಭಾಷಾ ಸಿನೆಮಾ ನಿಯಂತ್ರಣಕ್ಕೆಕಾಯ್ದೆಅಗತ್ಯ: ಎಚ್ಡಿಕೆ
ಬೆಂಗಳೂರು, ಅ.24: ರಾಜ್ಯದಲ್ಲಿ ಕನ್ನಡ ಭಾಷೆ ಹಾಗೂ ಚಿತ್ರರಂಗವನ್ನು ಉಳಿಸುವ ದೃಷ್ಟಿಯಿಂದ ಜೊತೆಗೆ ಪರಭಾಷಾ ಚಿತ್ರಗಳನ್ನು ನಿಯಂತ್ರಿಸುವ ಸಂಬಂಧ ಪ್ರತ್ಯೇಕವಾದ ಕಾಯ್ದೆ ತರುವ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಹಾವಳಿ ಮಿತಿಮೀರಿದೆ. ಇದನ್ನು ನಿಯಂತ್ರಿಸದಿದ್ದರೆ ಕನ್ನಡದ ನೆಲದಲ್ಲಿಯೆ ಕನ್ನಡ ಸಿನೆಮಾಗಳು ಮೂರನೆ ದರ್ಜೆಯ ಸ್ಥಾನಕ್ಕೆ ಇಳಿಯುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.ತ್ರರಂಗಕ್ಕೆ ಸಂಬಂಸಿದ ಯಾವುದೇ ಕಾನೂನು ಹೋರಾಟಕ್ಕೆ ನಾನು ಮುಂಚೂಣಿಯಲ್ಲಿರುತ್ತೇನೆ. ಕನ್ನಡ ಚಿತ್ರರಂಗ ಉಳಿಯಬೇಕಾದರೆ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾದ ಅಗತ್ಯವಿದೆ. ನಿರ್ಮಾಪಕರು ಉಳಿದರೆ ಮಾತ್ರ ಚಿತ್ರರಂಗ ಉಳಿಯಲು ಸಾಧ್ಯವೆಂಬ ವಾಸ್ತವತೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
Next Story