ದ್ವಿತೀಯ ಪಿಯು ಫಲಿತಾಂಶ: ವಿಜ್ಞಾನ ವಿಭಾಗದಲ್ಲಿ ರಾಧಿಕಾ ಪೈ, ಸೃಜನಾ, ಕಲಾ ವಿಭಾಗದಲ್ಲಿ ಚೈತ್ರಾ ರಾಜ್ಯಕ್ಕೆ ಪ್ರಥಮ
ಸೃಜನಾ ರಾಧಿಕಾ ಪೈ ಚೈತ್ರಾ
ಬೆಂಗಳೂರು, ಮೇ 11: 2016-17ನೆ ಸಾಲಿನಲ್ಲಿ ರಾಜ್ಯಾದ್ಯಂತ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಾಧಿಕಾ ಎಂ. ಪೈ ಹಾಗೂ ಮಂಗಳೂರಿನ ಎಕ್ಸ್ ಪರ್ಟ್ ಕಾಲೇಜಿನ ಸೃಜನಾ 596 ಅಂಕ ಗಳಿಸಿ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾರೆ.
ಕಲಾ ವಿಭಾಗದಲ್ಲಿ ಕೊಟ್ಟೂರಿನ ಹಿಂದೂ ಕಾಲೇಜಿನ ಚೈತ್ರಾ 600ರಲ್ಲಿ 589 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನಿಯಾಗಿದ್ದಾರೆ.
Next Story