ಪತ್ನಿ, ಮಕ್ಕಳಿಬ್ಬರ ಹತ್ಯೆ ಆರೋಪ: ಪೇದೆ ಸುಭಾಷ್ ಬಂಧನ
ಬೆಂಗಳೂರು, ಮೇ 26: ಪತ್ನಿ, ಮಕ್ಕಳಿಬ್ಬರ ಹತ್ಯೆ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಪೇದೆ ಸುಭಾಷ್ನನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಹೆಗಡೆ ನಗರದ ಪೊಲೀಸ್ ವಸತಿ ಗೃಹದಲ್ಲಿ ಮೇ 24 ರಂದು ವಿಷ ಇಂಜೆಕ್ಷನ್ ನೀಡಿ ಪತ್ನಿ ವೀಣಾ, ಮಕ್ಕಳಾದ ಮಾನ್ಯ ಮತ್ತು ಪೃಥ್ವಿಯನ್ನು ಕೊಲೆಗೈದಿರುವ ಆರೋಪ ಮೇಲೆ ಪೇದೆ ಸುಭಾಷ್ ವಿರುದ್ಧ ಮೊಕದ್ದಮೆ ದಾಖಲಾಗಿತ್ತು.
ಸುಭಾಷ್ ಸಹ ಮಾತ್ರೆ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಸ್ಥಳೀಯರು ಸುಭಾಷ್ನನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಶುಕ್ರವಾರ ಆರೋಪಿ ಪೇದೆಯನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
Next Story