ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ: ಏಳು ಜನರ ಬಂಧನ
ಬೆಂಗಳೂರು, ಜೂ. 23: ಮಸಾಜ್ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಏಳು ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಡೂರು ತಾಲೂಕಿನ ಮಲ್ಲಪ್ಪನಹಳ್ಳಿಯ ಮಂಜುನಾಥ, ಪಾಂಡವಪುರದ ರಾಕೇಶ್, ಪ್ರತಾಪ್, ಕೆಆರ್ಪೇಟೆಯ ಮಧು, ಶ್ರೀರಂಗಪಟ್ಟಣದ ಅನಿಲ್ ಹಾಗೂ ದಕ್ಷಿಣ ಕನ್ನಡದ ಉಜಿರೆಯ ನಿಖಿಲ್ ಪವನ್ ಸೇರಿ ಏಳು ಜನರು ಬಂಧಿತ ಆರೋಪಿಗಳೆಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಬಾಣಸವಾಡಿ ಹೊರಮಾವು ಮುಖ್ಯರಸ್ತೆಯ ಫುಡ್ ಬೋರ್ಡ್ ಜಂಕ್ಷನ್ ಬಳಿ ಟೆಚ್ ಸ್ಪಾ ಅಂಡ್ ಸಲೂನ್ ಹೆಸರಿನ ಮಸಾಜ್ ಸೆಂಟರ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
Next Story