ಸಕಲ ಸರಕಾರಿ ಗೌರವಗಳೊಂದಿಗೆ ಶ್ರೀದೇವಿ ಅಂತ್ಯಕ್ರಿಯೆ
ಹೊಸದಿಲ್ಲಿ, ಫೆ.28: ಸಕಲ ಸರಕಾರಿ ಗೌರವಗಳೊಂದಿಗೆ ಬಹುಭಾಷಾ ನಟಿ ಶ್ರೀದೇವಿಯವರ ಅಂತ್ಯಕ್ರಿಯೆ ಮುಂಬೈಯಲ್ಲಿ ನೆರವೇರಿತು. ಪತಿ ಬೋನಿ ಕಪೂರ್ ಅಂತಿಮ ವಿಧಿ ವಿಧಾನಗಳನ್ನು ನಡೆಸಿದರು. ಪುತ್ರಿಯರಾದ ಜಾಹ್ನವಿ ಹಾಗು ಖುಷಿ ತಾಯಿಗೆ ಕೊನೆಯ ವಿದಾಯ ಕೋರಿದರು.
ಲೋಖಂಡ್ವಾಲದಿಂದ ವಿಲ್ ಪಾರ್ಲೆವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡರು. ಶಾರೂಖ್ ಖಾನ್, ಕತ್ರಿನಾ ಕೈಫ್, ವಿದ್ಯಾಬಾಲನ್ ಸೇರಿದಂತೆ ಬಾಲಿವುಡ್ ನ ಹಲವು ನಟ, ನಟಿಯರು ಭಾಗವಹಿಸಿದ್ದರು.
ಕಪೂರ್ ಕುಟುಂಬದ ಎಲ್ಲಾ ಸದಸ್ಯರು ಸ್ಥಳದಲ್ಲಿದ್ದರು. ಅಂತ್ಯಕ್ರಿಯೆಯ ಸಂದರ್ಭ ಶ್ರೀದೇವಿಯವರ ಅನೇಕ ಸಹೋದ್ಯೋಗಿಗಳು ಭಾವುಕರಾಗಿದ್ದರು.
Next Story