ಕತ್ರಿನಾ ಸೋದರಿ ಇಸಬೆಲ್ಲಾ ಬಾಲಿವುಡ್ ಪ್ರವೇಶ
ಬಾಲಿವುಡ್ನ ಮೋಹಕ ನಟಿ ಕತ್ರಿನಾ ಕೈಫ್ ಅವರ ಕಿರಿಯ ಸೋದರಿ ಇಸಾಬೆಲ್ಲಾ ಕೈಫ್ ಇದೀಗ ಬೆಳ್ಳಿತೆರೆಗೆ ರಂಗಪ್ರವೇಶ ಮಾಡುತ್ತಿದ್ದಾರೆ. ‘ಟೈಮ್ ಟು ಡಾನ್ಸ್’ ಚಿತ್ರದ ಮೂಲಕ ಪ್ರೇಕ್ಷಕರ ಮನಗೆಲ್ಲಲು ಆಕೆ ಸನ್ನದ್ಧರಾಗುತ್ತಿದ್ದಾರೆ.ಚಿತ್ರದ ನಾಯಕ ಸೂರಜ್ ಪಾಂಚೋಲಿ, ಇತ್ತೀಚೆಗೆ ಟ್ವಿಟರ್ನಲ್ಲಿ ಇಸಾಬೆಲ್ಲಾರ ಚಿತ್ರರಂಗ ಪ್ರವೇಶವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಹೆಸರೇ ಹೇಳುವಂತೆ ಟೈಮ್ ಟು ಡಾನ್ಸ್, ಚಿತ್ರ ಪಕ್ಕಾ ಡಾನ್ಸ್ ಮನರಂಜನೆಯ ಚಿತ್ರವಾಗಿದೆ. ಚಿತ್ರದಲ್ಲಿ ಇಸಬೆಲ್ಲಾಗೆ ಬಾಲ್ರೂಂ ಹಾಗೂ ಲ್ಯಾಟಿನ್ ಡಾನ್ಸರ್ ನ ಪಾತ್ರವಂತೆ. ನಾಯಕ ಸೂರಜ್ ಪಾಂಚೋಲಿ ಸ್ಟ್ರೀಟ್ಡಾನ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಂತೂ, ನಾಯಕ ನಾಯಕಿಯರ ಡಾನ್ಸ್ ಜುಗಲ್ಬಂದಿ ನೋಡುವುದೇ ಕಣ್ಣಿಗೆ ಹಬ್ಬವಾಗಲಿದೆ ಎಂದಾಯಿತು.
ಇಸಾಬೆಲ್ಲಾಗೆ ಬಾಲ್ಯದಿಂದಲೇ ನೃತ್ಯದಲ್ಲಿ ಆಸಕ್ತಿಯಂತೆ.ಹಾಗಂತ ಆಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ತಾನು ಚಿತ್ರರಂಗ ಪ್ರವೇಶಿಸಿರುವುದು ತುಸು ತಡವಾಗಿದೆಯೆಂದು ಒಪ್ಪಿಕೊಳ್ಳುವ ಆಕೆ, ಚೊಚ್ಚಲ ಚಿತ್ರವಾದ ಟೈಮ್ಸ್ ಟು ಡಾನ್ಸ್ನಲ್ಲಿ ತನಗೆ ಚಿತ್ರರಂಗದಲ್ಲಿ ಭದ್ರವಾದ ತಳಹದಿಯಾಗಲಿದೆಯೆಂದು ಆಕೆ ಭರವಸೆ ವ್ಯಕ್ತಪಡಿಸಿದ್ದಾರೆ. ಟೈಮ್ ಟು ಡಾನ್ಸ್ ಮೂಲಕ ಸ್ಟಾನ್ಲಿ ಡಿಸೋಜಾ ಅವರು ನಿರ್ದೇಶಕರಾಗಿ ಬಾಲಿವುಡ್ಗೆ ಪರಿಚಯವಾಗಲಿದ್ದಾರೆ ಹಾಗೂ ಎಪ್ರಿಲ್ ಅಂತ್ಯದ ವೇಳೆಗೆ ಚಿತ್ರದ ಶೂಟಿಂಗ್ ಆರಂಭಗೊಳ್ಳಲಿದೆ. ಆದರೆ ಚಿತ್ರಕ್ಕಾಗಿ ಪೂರ್ವ ಸಿದ್ಧತೆ ಒಂದು ವರ್ಷದ ಹಿಂದೆಯೇ ಆರಂಭಗೊಂಡಿತ್ತಂತೆ. ಇಸಬೆಲ್ಲಾ ಹಾಗೂ ಸೂರಜ್ ಇಬ್ಬರೂ ತಮ್ಮ ಪಾತ್ರಕ್ಕಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಚಿತ್ರಕ್ಕಾಗಿ ಲಂಡನ್ನಲ್ಲಿ ಬರೋಬ್ಬರಿ 50 ಶೂಟಿಂಗ್ ನಡೆಯಲಿದ್ದು, ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.