ಟಗರು -2ನಲ್ಲಿ ಪವರ್ಸ್ಟಾರ್ ಪುನೀತ್
ಬಾಕ್ಸ್ಆಫೀಸ್ನಲ್ಲಿ ಜೋರಾಗಿಯೇ ಗುಟುರುಹಾಕಿರುವ ‘ಟಗರು’ ಶತದಿನಕ್ಕೆ ಕಾಲಿಟ್ಟಿರುವಂತೆಯೇ,ನಿರ್ದೇಶಕ ದುನಿಯಾ ಸೂರಿ ಸ್ಯಾಂಡಲ್ವುಡ್ ಚಿತ್ರಪ್ರೇಮಿಗಳಿಗೊಂದು ಅಚ್ಚರಿಯ ಸುದ್ದಿ ನೀಡಿದ್ದಾರೆ. ಹೌದು. ಟಗರು ಚಿತ್ರದ ಸಿಕ್ವೇಲ್ ಅನ್ನು ನಿರ್ಮಿಸುವುದಾಗಿ ಅವರು ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗೆ ಪವರ್ಸ್ಟಾರ್ ಪುನೀತ್ ನಟಿಸಲಿದ್ದಾರೆಂದು ಅವರು ಹೇಳಿದ್ದಾರೆ.
ಕುರುಕ್ಷೇತ್ರ, ವಿಲನ್ ಹಾಗೂ ಕೆಜಿಎಫ್ ಚಿತ್ರಗಳ ಹಾಗೆ ಇದೊಂದು ಬಿಗ್ಬಜೆಟ್ ಚಿತ್ರವಾಗಿದ್ದು, ಕನ್ನಡ ಚಿತ್ರರಂಗದಲ್ಲೊಂದು ಹೊಸ ಮೈಲುಗಲ್ಲು ಸೃಷ್ಟಿಸಲಿದೆಯೆಂದು ಸೂರಿ ಭರವಸೆ ಹೊಂದಿದ್ದಾರೆ. ಟಗರು ಚಿತ್ರದಲ್ಲಿದ್ದಂತೆ ಈ ಚಿತ್ರದಲ್ಲೂ ಶಿವರಾಜ್ ಕುಮಾರ್ ಸೂಪರ್ಕಾಪ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಪುನೀತ್ಗಾಗಿ ವಿಭಿನ್ನವಾದ ಪಾತ್ರವೊಂದು ಸೃಷ್ಟಿಯಾಗಲಿದೆ ಎಂದವರು ಹೇಳಿದ್ದಾರೆ. ಇದರೊಂದಿಗೆ ಪುನೀತ್ ಹಾಗೂ ಶಿವರಾಜ್ ಸೋದರರನ್ನು ಒಂದೇ ಚಿತ್ರದಲ್ಲಿ ನೋಡಬೇಕೆಂಬ ಅಭಿಮಾನಿಗಳ ಹೆಬ್ಬಯಕೆಯನ್ನು ಕೂಡಾ ಸೂರಿ ಈಡೇರಿಸಲಿದ್ದಾರೆ.
ಸೂರಿ ಈ ಮೊದಲು ಪುನೀತ್ ಅಭಿನಯದ ಜಾಕಿ, ಅಣ್ಣಾಬಾಂಡ್ ಚಿತ್ರಗಳನ್ನು ನಿರ್ದೇಶಿಸಿದ್ದರು. ಶಿವರಾಜ್ಗೆ ಸೂರಿ ಟಗರುಗಿಂತ ಮೊದಲು ಕಡ್ಡಿಪುಡಿ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರದಲ್ಲಿ ಉಳಿದ ತಾರಾಗಣದ ಬಗ್ಗೆ ಸೂರಿ ಇನ್ನೂ ನಿರ್ಧರಿಸಿಲ್ಲ. ಟಗರು ಚಿತ್ರದ ನಿರ್ಮಾಪಕ ಪಿ.ಶ್ರೀಕಾಂತ್ ಅವರೇ ಟಗರು -2ಗೂ ಹಣ ಹೂಡಲಿದ್ದಾರೆ. ಈ ಬಿಗ್ ಬಜೆಟ್ ಚಿತ್ರದ ನಾಯಕಿ ಸೇರಿದಂತೆ ಉಳಿದ ತಾರಾಗಣದ ಬಗ್ಗೆ ಸೂರಿ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಏನೇ ಇರಲಿ, ಸ್ಯಾಂಡಲ್ವುಡ್ನ ಇಬ್ಬರು ಸೂಪರ್ಸ್ಟಾರ್ಗಳನ್ನು ಒಂದೇ ಪರದೆಯಲ್ಲಿ ತೋರಿಸಲಿರುವ ಸೂರಿ ಚಿತ್ರ ರಸಿಕರಿಗೆ ಅದ್ದೂರಿಯ ಮನ ರಂಜನೆ ನೀಡಲು ಸಿದ್ಧ ರಾಗುತ್ತಿದ್ದಾರೆ.