ಪ್ರಸಿದ್ಧ ಬಹುಭಾಷಾ ಗಾಯಕ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಹೊಸದಿಲ್ಲಿ, ಅ.6: ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಲೈಂಗಿಕ ಕಿರುಕುಳದ ಆರೋಪ ಮಾಡಿದ ನಂತರ ಸೆಲೆಬ್ರಿಟಿಗಳ ವಿರುದ್ಧ ಇಂತಹ ಆರೋಪಗಳು ಒಂದೊಂದಾಗಿ ಕೇಳಿ ಬರುತ್ತಿವೆ. ಭಾರತದಲ್ಲೂ #MeToo ಆಂದೋಲನ ಶುರುವಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೀಗ ಪತ್ರಕರ್ತೆಯೊಬ್ಬರು ಪ್ರಸಿದ್ಧ ಬಹುಭಾಷಾ ಗಾಯಕ ಕೈಲಾಶ್ ಖೇರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ತನ್ನ ಇನ್ನೊಬ್ಬ ಮಹಿಳಾ ಸಹೋದ್ಯೋಗಿಯೊಂದಿಗೆ 2006ರಲ್ಲಿ ಸಂದರ್ಶನಕ್ಕಾಗಿ ಕೈಲಾಶ್ ಮನೆಗೆ ತೆರಳಿದ್ದಾಗ ಲೈಂಗಿಕ ಕಿರುಕುಳ ನೀಡಲಾಗಿತ್ತು ಎಂದು ನತಾಶಾ ಹೇಮ್ರಜನಿ ಎಂಬವರು ಆರೋಪಿಸಿದ್ದಾರೆ.
“ಫೋಟೊ ತೆಗೆಯುವುದಕ್ಕಾಗಿ ನನ್ನನ್ನು ಸಹೋದ್ಯೋಗಿಯ ಜೊತೆ ಕೈಲಾಶ್ ಖೇರ್ ಮನೆಗೆ ಕಳುಹಿಸಲಾಗಿತ್ತು. ಸಂದರ್ಶನ ನಡೆಸುವಾಗ ‘ಈ ವಿಚಿತ್ರ ವ್ಯಕ್ತಿ’ ನಮ್ಮಿಬ್ಬರ ನಡುವೆ ಸಾಧ್ಯವಾದಷ್ಟು ಹತ್ತಿರದಲ್ಲಿ ಕುಳಿತುಕೊಂಡ. ನಮ್ಮ ತೊಡೆಗಳ ನಡುವೆ ಕೈ ಹಾಕಿದ” ಎಂದು ನತಾಶ ಆರೋಪಿಸಿದ್ದಾರೆ.
Next Story