ಹೊಸಚಿತ್ರದಲ್ಲಿ ಮತ್ತೆ ಒಂದಾದ ಮೋಹನ್ಲಾಲ್ ಪ್ರಿಯದರ್ಶನ್
2 ವರ್ಷಗಳ ಬಳಿಕ ಮಲಯಾಳ ಚಿತ್ರ ರಂಗದ ಸೂಪರ್ ಸ್ಟಾರ್ ಮೋಹನ್ಲಾಲ್ ಹಾಗೂ ನಿರ್ದೇಶಕ ಪ್ರಿಯದರ್ಶನ್ ‘ಮರಕ್ಕರ್: ದಿ ಲಯನ್ ಆಫ್ ಅರೇಬಿಯನ್ ಸೀ’ ಚಿತ್ರಕ್ಕಾಗಿ ಜೊತೆಯಾಗಿದ್ದಾರೆ. ಈ ಚಿತ್ರ ಡಿಸೆಂಬರ್ 1ರಂದು ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಆರಂಭವಾಗಲಿದೆ. ಈ ಹಿಂದೆ 2016ರಲ್ಲಿ ಸೂಪರ್ ಹಿಟ್ ಚಿತ್ರ ‘ಒಪ್ಪಂ’ ಚಿತ್ರದಲ್ಲಿ ಅವರು ಜೊತೆಯಾಗಿ ಕೆಲಸ ಮಾಡಿದ್ದರು. ‘‘ಹೊಸ ಚಿತ್ರದ ಶೇ. 75 ಭಾಗವನ್ನು ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾಗುವುದು. ಉಳಿದ ಭಾಗವನ್ನು ಊಟಿ ಹಾಗೂ ರಾಮೇಶ್ವರಂನಲ್ಲಿ ಚಿತ್ರೀಕರಿಸಲಾಗುವುದು’’ ಎಂದು ಪ್ರಿಯದರ್ಶನ್ ತಿಳಿಸಿದ್ದಾರೆ. ಈ ಚಿತ್ರ ಕಲ್ಲಿಕೋಟೆಯ ಝಮೋರಿನ್ನ ನೌಕಾ ಪಡೆಯ ಪ್ರಖ್ಯಾತ ವರಿಷ್ಠ ಕುಂಞಾಲಿ ಮರಕ್ಕರ ಅವರ ಕತೆಯನ್ನು ಹೇಳುತ್ತದೆ. ಭಾರತೀಯ ಕರಾವಳಿಯಲ್ಲಿ ಮೊದಲು ನೌಕಾ ರಕ್ಷಣೆ ಆಯೋಜಿಸಿದವರು ಕುಂಞಾಲಿ ಮರಕ್ಕರ ಎಂದು ಹೇಳಲಾಗುತ್ತಿದೆ. ನಿರ್ಮಾಪಕ ಸುರೇಶ್ ಕುಮಾರ್ ಅವರ ಪುತ್ರಿ ಕೀರ್ತಿ ಸುರೇಶ್ ಕುಮಾರ್ ಈ ಚಿತ್ರದ ನಿರ್ಮಾಪಕಿ. ನಟಿ ಮೇನಕಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.