ಹಿರಿಯ ಬಾಲಿವುಡ್ ನಟ ಖಾದರ್ ಖಾನ್ ಸ್ಥಿತಿ ಗಂಭೀರ
ಮುಂಬೈ,ಡಿ.28: ಹಿರಿಯ ಬಾಲಿವುಡ್ ನಟ ಖಾದರ್ ಖಾನ್ ಅವರನ್ನು ಉಸಿರಾಟದ ಸಮಸ್ಯೆಯಿಂದಾಗಿ ಕೆನಡಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕುಸಿಯುತ್ತಿರುವ ಅವರ ಆರೋಗ್ಯ ಸ್ಥಿತಿಯನ್ನು ಗಮನಿಸಿ ಸಾಮಾನ್ಯ ವೆಂಟಿಲೇಟರ್ ಬದಲು ಅವರನ್ನು ವಿಶೇಷ ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖಾದರ್ ಖಾನ್ ಅವರು ಕೆನಡಾದಲ್ಲಿ ತಮ್ಮ ಪುತ್ರ ಹಾಗೂ ಸೊಸೆಯೊಂದಿಗೆ ಕೆಲ ಸಮಯದಿಂದ ವಾಸಿಸುತ್ತಿದ್ದಾರೆ.
ಅವರಿಗೆ ನ್ಯುಮೋನಿಯಾದ ಚಿಹ್ನೆಗಳೂ ಕಾಣಿಸಿಕೊಂಡಿದ್ದು ಮಾತನಾಡುವ ಸ್ಥಿತಿಯಲ್ಲಿಲ್ಲವೆಂದು ತಿಳಿದು ಬಂದಿದೆ. ನಟನಿಗೆ ಇತ್ತೀಚೆಗೆ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಶಸ್ತ್ರಕ್ರಿಯೆ ಯಶಸ್ವಿಯಾಗಿದ್ದರೂ ನಂತರ ಅನಾರೋಗ್ಯದಿಂದ ಅವರಿಗೆ ನಡೆದಾಡಲು ಆಗಿಲ್ಲವೆಂದು ಅವರ ಪುತ್ರ ಹೇಳಿದ್ದಾರೆ.
ನಟ ಖಾದರ್ ಖಾನ್ ಪ್ರೊಗ್ರೆಸ್ಸಿವ್ ಸುಪ್ರಾನ್ಯುಕ್ಲಿಯರ್ ಪಾಲ್ಸಿ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿದ್ದಾರೆನ್ನಲಾಗಿದೆ.
Next Story