‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ಯುಟ್ಯೂಬ್ ನಿಂದ ಮಾಯ!
ಹೊಸದಿಲ್ಲಿ, ಜ.2: ಅನುಪಮ್ ಖೇರ್ ನಟನೆಯ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ಯುಟ್ಯೂಬ್ ನಿಂದ ಮಾಯವಾಗಿದ್ದು, ಅನುಪಮ್ ಖೇರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುಟ್ಯೂಬ್ ನಲ್ಲಿ ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಚಿತ್ರದ ಟ್ರೇಲರ್ ಸಿಗುತ್ತಿಲ್ಲ ಎಂದು ಅಭಿಮಾನಿಗಳು ದೂರುತ್ತಿರುವುದಾಗಿ ಅನುಪಮ್ ಖೇರ್ ಟ್ವೀಟ್ ಮಾಡಿದ್ದಾರೆ.
“ಯುಟ್ಯೂಬ್!!! ‘ದ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್’ ಎಂದು ಸರ್ಚ್ ಮಾಡಿದರೆ ಲಭಿಸುತ್ತಿಲ್ಲ ಎಂದು ನನಗೆ ಕರೆ ಹಾಗು ಸಂದೇಶಗಳು ಬರುತ್ತಿವೆ. ನಮ್ಮ ಟ್ರೇಲರ್ ಟ್ರೆಂಡಿಂಗ್ ನಲ್ಲಿತ್ತು” ಎಂದವರು ಟ್ವೀಟ್ ಮಾಡಿದ್ದಾರೆ.
Next Story