ವಿವೇಕ್ ಒಬೆರಾಯ್ ನಟನೆಯ ‘ಪಿಎಂ ನರೇಂದ್ರ ಮೋದಿ’ ಚಿತ್ರದ ಟ್ರೈಲರ್ ಬಿಡುಗಡೆ
ಹೊಸದಿಲ್ಲಿ, ಮಾ.21: ನಟ ವಿವೇಕ್ ಒಬೆರಾಯ್ ನಟನೆಯ ಪ್ರಧಾನಿ ನರೇಂದ್ರ ಮೋದಿಯವರ ಜೀವನವನ್ನಾಧರಿಸಿದ ಚಿತ್ರ ‘ಪಿಎಂ ನರೇಂದ್ರ ಮೋದಿ’ಯ ಟ್ರೈಲರ್ ಬಿಡುಗಡೆಯಾಗಿದೆ.
ಪ್ರಧಾನಿಯವರ ಬಾಲ್ಯ, ರಾಜಕೀಯ ಪ್ರವೇಶ, ವೈಯಕ್ತಿಕ ಜೀವನ ಹೀಗೆ ಹಲವು ಅಂಶಗಳು ಚಿತ್ರದಲ್ಲಿದೆ ಎನ್ನಲಾಗಿದೆ. ಚಿತ್ರದಲ್ಲಿ ಇತರ ನಟರಾದ ಬೊಮಾನ್ ಇರಾನಿ, ಮನೋಜ್ ಜೋಶಿ ಹಾಗು ಝರೀನಾ ವಹಾಬ್ ಸೇರಿ ಹಲವರು ನಟಿಸಿದ್ದಾರೆ.
ಈ ಹಿಂದೆ ಮೇರಿ ಕೋಮ್ ಮತ್ತು ಸರಬ್ಜಿತ್ ಚಿತ್ರಗಳನ್ನು ನಿರ್ದೇಶಿಸಿದ್ದ ಒಮುಂಗ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
Next Story