ಡಿಸೆಂಬರ್ 27ರಂದು 'ಶ್ರೀಮನ್ನಾರಾಯಣ' ರಿಲೀಸ್
ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಕೊನೆಗೂ ಡಿಸೆಂಬರ್ 27ರಂದು ರಿಲೀಸ್ ಆಗಲಿದೆ. ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್ ಅವರು ಚಿತ್ರದ ಬಿಡುಗಡೆಗೆ ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಜಗತ್ತಿನಾದ್ಯಂತ ಬರೋಬ್ಬರಿ 20 ದೇಶಗಳಲ್ಲಿ, 175ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.
ಅವನೇ ಶ್ರೀಮನ್ನಾರಾಯಣ ನವೆಂಬರ್ನಲ್ಲಿ ಬಿಡುಗಡೆಯಾಗ ಬೇಕಿತ್ತಾದರೂ, ಗ್ರಾಫಿಕ್ ಕೆಲಸಗಳು ಬಾಕಿಯಿದ್ದು ದರಿಂದಾಗಿ ಮುಂದೂಡಲ್ಪಟ್ಟಿತ್ತು. ಇದೀಗ ಚಿತ್ರವು ಡಿಸೆಂಬರ್ 27ರಂದು ಬಿಡುಗಡೆ ಗೊಳ್ಳುವುದು ಬಹುತೇಕ ಖಚಿತವಾಗಿದೆ.
ಚಿತ್ರದಲ್ಲಿ ರಕ್ಷಿತ್ಗೆ ನಾಯಕಿಯಾಗಿ ಶಾನ್ವಿ ಶ್ರೀವಾಸ್ತವ್ ನಟಿಸಿದ್ದಾರೆ. ಚಿತ್ರದ ಕಥೆಯ ಬಗ್ಗೆ ನಿರ್ಮಾಪಕರಾಗಲಿ, ನಿರ್ದೇಶಕ ಸಚಿನ್ ರವಿ ಆಗಲಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ ಚಿತ್ರದ ಟೀಸರ್ ಕಂಡಾಗ ದಬಾಂಗ್ನಲ್ಲಿ ಸಲ್ಮಾನ್ ಖಾನ್ ಅವರ ಚುಲ್ಬುಲ್ ಪಾಂಡೆ ಪಾತ್ರದ ನೆನಪಾಗುತ್ತದೆ. ಅವನೇ ಶ್ರೀಮನ್ನಾರಾಯಣದಲ್ಲಿ ರಕ್ಷಿತ್ ಶೆಟ್ಟಿ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಕಿರಿಕ್ಪಾರ್ಟಿಯಲ್ಲಿ ರಕ್ಷಿತ್ಗೆ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ , ಪೊಗರು ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ.