ರಾಕ್ಷಸನ್ ರಿಮೇಕ್ನಲ್ಲಿ ಆಯುಷ್ಮಾನ್
ಈ ವರ್ಷ ವಿಮರ್ಶಕರ ಮೆಚ್ಚುಗೆ ಪಡೆದ ‘ಆರ್ಟಿಕಲ್ 15’ ಸಿನೆಮಾದಲ್ಲಿ ಆಯುಷ್ಮಾನ್ ಖುರಾನ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಿದ್ದರು. ಜಾತಿ ಆಧಾರಿತ ಅಸಹ್ಯ ಸಮಾಜದ ಕುರಿತ ಈ ಥ್ರಿಲ್ಲರ್ನ ಸೂಕ್ಷ್ಮ ನಟನೆಗೆ ಅವರು ಪ್ರತಿಯೊಬ್ಬರಿಂದಲೂ ಮೆಚ್ಚುಗೆ ಗಳಿಸಿದ್ದರು. ಈಗ ಆಯುಷ್ಮಾನ್ ಖುರಾನ ಮತ್ತೊಮ್ಮೆ ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಬಾಲಿವುಡ್ನ ಗಾಸಿಪ್ ಪ್ರಕಾರ ತಮಿಳಿನ ‘ರಾಕ್ಷಸನ್’ ಚಿತ್ರದ ರಿಮೇಕ್ನಲ್ಲಿ ಆಯುಷ್ಮಾನ್ ಖುರಾನ ನಟಿಸಲಿದ್ದಾರೆ. 2018ರಲ್ಲಿ ಬಿಡುಗಡೆಯಾಗಿದ್ದ ಥ್ರಿಲ್ಲರ್ ಚಿತ್ರ ‘ರಾಕ್ಷಸನ್’ ಶಾಲಾ ಮಕ್ಕಳನ್ನು ಗುರಿಯಾಗಿರಿಸಿ ಸರಣಿ ಹತ್ಯೆ ನಡೆಸುತ್ತಿದ್ದ ಹಂತಕನನ್ನು ಭೇಟೆಯಾಡುವ ಪೊಲೀಸ್ ಅಧಿಕಾರಿಯ ಕಥೆ ಹೊಂದಿದೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರವನ್ನು ವಿಷ್ಣು ವಿಶಾಲ್ ನಿರ್ವಹಿಸಿದ್ದರು. ಚಿತ್ರ ದಕ್ಷಿಣ ಭಾರತದಲ್ಲಿ ಅಭೂತಪೂರ್ವ ಹಿಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ‘ರಟಾಸನ್’ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲು ಬಾಲಿವುಡ್ ರಿಮೇಕ್ ಹಕ್ಕು ಪಡೆದುಕೊಂಡಿತ್ತು. ಈ ಬಗೆಗಿನ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ, ಆಯುಷ್ಮಾನ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಹಾಗೂ ಅವರು ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ಗಾಸಿಪ್ ಬಾಲಿವುಡ್ ಅಂಗಣದಲ್ಲಿ ಹರಿದಾಡುತ್ತಿದೆ. ಆಯುಷ್ಮಾನ್ ಖುರಾನಾ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ತುಂಬಾ ಮುತುವರ್ಜಿ ವಹಿಸುತ್ತಿದ್ದಾರೆ. ಆವರ ಕೈಯಲ್ಲಿ ಈಗಾಗಲೇ ಕೆಲವು ಅತ್ಯುತ್ತಮ ಸ್ಕ್ರಿಪ್ಟ್ಗಳು ಇವೆ. ಅವರ ಚಿತ್ರಗಳು ಅನನ್ಯ ಹಾಗೂ ಚಮತ್ಕಾರದಿಂದ ಕೂಡಿರುತ್ತದೆ. ಆದುದರಿಂದ ಚಿತ್ರಪ್ರೇಮಿಗಳು ಅವರ ಚಿತ್ರಗಳನ್ನು ಇಷ್ಟಪಡುತ್ತಾರೆ. ಈ ವರ್ಷ ಅವರು ಆರ್ಟಿಕಲ್ 15, ಬಾಲಾ ಹಾಗೂ ಡ್ರೀಮ್ಗರ್ಲ್ ಎಂಬ 3 ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರ ಮುಂದಿನ ಚಿತ್ರ ‘ಸುಭ್ ಮಂಗಲ್ ಜ್ಯಾದಾ ಸಾವಧಾನ್’. ಇದು ಸಲಿಂಗ ದಂಪತಿಯ ಕುರಿತ ಚಿತ್ರ.